ಉಡುಪಿ | ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಅಧ್ಯಕ್ಷರಾಗಿ ಅಜ್ಮಲ್ ಆಯ್ಕೆ
ಉಡುಪಿ, ನ.25: ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕಿನ ವಾರ್ಷಿಕ ಮಹಾಸಭೆಯು ಶಿರೂರು ಯುನಿಯನ್ ಸುಪರ್ ಮಾರ್ಕೆಟ್ ನ ಮೇಲ್ ಮಹಡಿಯ ಇಸ್ಲಾಹಿ ತಂಜೀಮ್ ಕಚೇರಿಯಲ್ಲಿ ಇತ್ತೀಚಿಗೆ ನಡೆಯಿತು.
ಸಭಾಧ್ಯಕ್ಷತೆಯನ್ನು ಮಾಮ್ದು ಇಬ್ರಾಹೀಂ ಶಿರೂರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ನಮ್ಮ ನಾಡ ಒಕ್ಕೂಟದ ಕಾರ್ಯ ಚಟುವಟಿಕೆಗಳ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ನಕ್ವಾ ಯಾಹ್ಯಾ, ಪ್ರಧಾನ ಕಾರ್ಯದರ್ಶಿ ಫಾಝಿಲ್ ಆದಿಉಡುಪಿ, ಮಾಜಿ ಜಿಲ್ಲಾ ಅಧ್ಯಕ್ಷ ಮುಷ್ತಾಕ್ ಬೆಳ್ವೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಖಲೀಲ್ ಕಾಪ್ಸಿ ವರದಿ ಮಂಡಿಸಿದರು. ಖಜಾಂಚಿ ಪರಿ ಹುಸೈನ್ ರವರು ಲೆಕ್ಕ ಪತ್ರ ಮಂಡಿಸಿದರು.
ತಾಲೂಕು ಉಸ್ತುವಾರಿ ಮಮ್ದು ಇಬ್ರಾಹಿಂ ಸಾಹ್ಗ್ಡೇ ಮತ್ತು ಚುನಾವಣಾ ಅಧಿಕಾರಿಗಳಾದ ನಿಹಾರ್ ಅಹ್ಮದ್ ಕುಂದಾಪುರ, ಅಬ್ದುಲ್ ಖಾದರ್ ಮೂಡುಗೋಪಾಡಿ, ಹಾರೂನ್ ರಶೀದ್ ಸಾಸ್ತಾನ್ ರವರು ಬೈಂದೂರು ತಾಲೂಕಿನ ಹೊಸ ಸಮಿತಿ ರಚನೆಯ ಪ್ರಕ್ರಿಯೆ ನಡೆಸಿಕೊಟ್ಟರು.
2026-27 ಸಾಲಿನ ನೂತನ ಅಧ್ಯಕ್ಷರಾಗಿ ಸೈಯದ್ ಅಜ್ಮಲ್ ಸಿ.ಎ.ಶಿರೂರು, ಉಪಾಧ್ಯಕ್ಷರಾಗಿ ತಮ್ಟಿಕರ್ ಮುಹಮ್ಮದ್ ಇಲ್ಯಾಸ್ ಬೈಂದೂರು, ಪ್ರಧಾನ ಕಾರ್ಯದರ್ಶಿಯಾಗಿ ಖಲೀಲ್ ಕಾಪ್ಸಿ ಶಿರೂರು, ಜಂಟಿ ಕಾರ್ಯದರ್ಶಿಯಾಗಿ ತಾರಿಸಲ್ಲಾ ಮುಹಮ್ಮದ್ ಗೌಸ್ ಶಿರೂರು, ಕೋಶಾಧಿಕಾರಿಯಾಗಿ ಅಮೀರ್ ಹುಸೈನ್ ನಾಗೂರು, ಸಂಘಟನಾ ಕಾರ್ಯದರ್ಶಿಯಾಗಿ ಡಾ.ಮೊಹಮ್ಮದ್ ತಾಹಾ ಶಿರೂರು, ತಾಲೂಕು ಸಮಿತಿ ಸದಸ್ಯರಾಗಿ, ಪರಿ ಹುಸೈನ್ ಶಿರೂರು, ಮಾಮ್ದು ಇಬ್ರಾಹೀಂ ಶಿರೂರು, ಕಾವಾ ಸಯೀದ್ ಶಿರೂರು, ಮುಝಫ್ಫರ್ ಕಿರಿಮಂಜೇಶ್ವರ, ಎನ್.ಎಸ್.ರಿಜ್ವಾನ್ ಬೊಳ್ಕಿಂಬೊಳೆ, ಉಸ್ಮಾನ್ ನಾಗೂರು, ಅಬ್ದುಲ್ ಸಮಿ ಹಳಗೇರಿ, ಜೈನುಲ್ ಅಬೀದಿನ್ ಹಳಗೇರಿ, ಫೈಝಾನ್ ಕಿರಿಮಂಜೇಶ್ವರ, ಕಾಝಿ ಇರ್ಶಾದ್ ಕಿರಿಮಂಜೇಶ್ವರ, ಸಯ್ಯದ್ ಅಸ್ಲಮ್ ಶಿರೂರು, ನಿಹಾಲ್ ಶಿರೂರು, ಶೇಕ್ ನಸ್ರುಲ್ಲಾ ಕಿರಿಮಂಜೇಶ್ವರ, ಮುದಸ್ಸಿರ್, ಸಮಿಉಲ್ಲಾ ಶೇಖ್ ಕಿರಿಮಂಜೇಶ್ವರ ಮತ್ತು ಅಮೀನ್ ಗೊಳಿಹೊಳೆ ಆಯ್ಕೆಯಾದರು. ಅಲ್ ಹಾಶ್ಮಿ ಮಸೀದಿಯ ಮುಅಝ್ಝಿನ್ ಅಬ್ದುಲ್ ಕಯ್ಯುಮ್ ಕಿರಾತ್ ಪಠಿಸಿದರು.
ಉಪಾಧ್ಯಕ್ಷರಾದ ತಮ್ಟಿಕರ್ ಮೊಹಮ್ಮದ್ ಇಲ್ಯಾಸ್ ಬೈಂದೂರು ವಂದಿಸಿದರು.