ಉಡುಪಿ: ಜೈಂಟ್ಸ್ ಗ್ರೂಪ್ನಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು
ಉಡುಪಿ: ಜೈಂಟ್ಸ್ ಗ್ರೂಪ್ ಉಡುಪಿ ವತಿಯಿಂದ ಒಂದು ವಾರದ ಅವಧಿಯಲ್ಲಿ ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು.
ಈ ಒಂದು ವಾರದ ಸೇವಾ ಕಾರ್ಯಕ್ರಮಗಳ ಅಂಗವಾಗಿ ರಕ್ತದಾನ ಶಿಬಿರ, ಗೋಶಾಲೆಗೆ ಜಾನುವಾರುಗಳ ಮೇವು, ವೃದ್ಧಾಶ್ರಮದ ಸಿಬ್ಬಂದಿಗೆ ಕೈಗವಸು, ವೃದ್ಧಾಶ್ರಮಗಳಿಗೆ ಹಣ್ಣು ಹಂಪಲು, ವಯಸ್ಕರ ಬಳಕೆಯ ಪ್ಯಾಡ್, ಆಹಾರ ಸಾಮಗ್ರಿ, ವೀಲ್‌ಚೇರ್, ಶಾಲಾ ಮಕ್ಕಳಿಗೆ ಸಮವಸ್ತ್ರಗಳ ವಿತರಣೆ ಹಾಗೂ ರಸ್ತೆ ಉಬ್ಬುಗಳಿಗೆ ಬಣ್ಣ ಬಳಿಯುವ ಕಾರ್ಯ ಸೇರಿದಂತೆ ಹಲವು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸೇವಾ ಕಾರ್ಯಕ್ರಮಗಳಲ್ಲಿ ಜೈಂಟ್ಸ್ ಕೇಂದ್ರ ಸಮಿತಿ ಸದಸ್ಯ ಜಿ. ದಿನಕರ್ ಅಮೀನ್, ಜೈಂಟ್ಸ್ ಗ್ರೂಪ್ ಉಡುಪಿ ಅಧ್ಯಕ್ಷ ಜಿ. ವಿನಯ್ ಕುಮಾರ್ ಪೂಜಾರಿ, ಉಪಾಧ್ಯಕ್ಷ ಜಿ. ದಯಾನಂದ ಶೆಟ್ಟಿ, ಕಾರ್ಯದರ್ಶಿ ದಿವಾಕರ್ ಪೂಜಾರಿ, ನಿರ್ದೇಶಕರಾದ ವಾದಿರಾಜ್ ಸಾಲ್ಯಾನ್, ಡಯಾನಾ ಸುಪ್ರಿಯಾ, ಟೀನಾ, ಸಮೀತ್ ಶೆಟ್ಟಿ ಹಾಗೂ ರೇಖಾ ಪೈ, ಜೊತೆಗೆ ಮಾಜಿ ಅಧ್ಯಕ್ಷರಾದ ಎಂ. ಇಕ್ಬಾಲ್ ಮನ್ನಾ, ಜಗದೀಶ್ ಅಮೀನ್, ರಾಜೇಶ್ ಶೆಟ್ಟಿ ಹಾಗೂ ಚಿದಾನಂದ ಪೈ ಸೇರಿದಂತೆ ಹಲವು ಜೈಂಟ್ಸ್ ಸದಸ್ಯರು ಭಾಗವಹಿಸಿದ್ದರು.
ಸಮಾಜದ ಒಳಿತಿಗಾಗಿ ನಿರಂತರವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಜೈಂಟ್ಸ್ ಗ್ರೂಪ್ ಉಡುಪಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.