×
Ad

ಉಡುಪಿ | ಕಿಶೋರ ಯಕ್ಷಗಾನ ಸಂಭ್ರಮ-2025 ಉದ್ಘಾಟನೆ

Update: 2025-12-03 21:19 IST

ಉಡುಪಿ, ಡಿ.3: ಉಡುಪಿ ಆಸುಪಾಸಿನ 25 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿರುವ ಕಿಶೋರ ಯಕ್ಷಗಾನ ಸಂಭ್ರಮ - 2025ನ್ನು ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮಂಗಳವಾರ ರಾಜಾಂಗಣದಲ್ಲಿ ಜ್ಯೋತಿ ಬೆಳಗಿಸಿ, ಉದ್ಘಾಟಿಸಿದರು.

‘ಯಕ್ಷಗಾನ ನಮ್ಮ ಸಂಸ್ಕತಿಯನ್ನು, ಪುರಾಣಜ್ಞಾನವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಅಪೂರ್ವವಾದ ಕಲಾಪ್ರಕಾರವಾಗಿದೆ. ಮುಂದಿನ ವರ್ಷಗಳಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿರಂತರ ಅನ್ನದಾನದಂತೆ ಯಕ್ಷಗಾನ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಿ, ಈ ಕಲೆಯ ಆಸರೆಗೆ ಅನುವು ಮಾಡಿಕೊಡಲಾಗುವುದು. ಎಲ್ಲಾ ಮಠ ಮಂದಿರಗಳು ಇದನ್ನು ಬದ್ಧತೆಯಿಂದ ಮಾಡಬೇಕಾಗಿದೆ’ ಎಂದು ಪುತ್ತಿಗೆಶ್ರೀಗಳು ತಮ್ಮ ಅನುಗ್ರಹ ಸಂದೇಶದಲ್ಲಿ ತಿಳಿಸಿದರು.

ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಹಾಗೂ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳರು ಶುಭ ಹಾರೈಸಿದರು. ಉಡುಪಿಯ ಮಾಜಿ ಶಾಸಕ, ಯಕ್ಷಶಿಕ್ಷಣ ಟ್ರಸ್ಟ್ ಸ್ಥಾಪಕಾಧ್ಯಕ್ಷರೂ ಆದ ಕೆ. ರಘುಪತಿ ಭಟ್, ಕನ್ನಡ ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಯಕ್ಷಶಿಕ್ಷಣ ಟ್ರಸ್ಟ್ ನ ವಿಶ್ವಸ್ಥರಾದ ಎಸ್.ವಿ.ಭಟ್, ಯು.ಎಸ್. ರಾಜಗೋಪಾಲ ಆಚಾರ್ಯ, ಕೋಶಾಧಿಕಾರಿ ಗಣೇಶ ಬ್ರಹ್ಮಾವರ, ಯಕ್ಷಗಾನ ಕಲಾರಂಗದ ಕೆ. ಸದಾಶಿವ ರಾವ್, ಭುವನ ಪ್ರಸಾದ ಹೆಗ್ಡೆ, ಎ. ಅನಂತರಾಜ ಉಪಾಧ್ಯಾಯ, ಕೆ. ಅಜಿತ್ ಕುಮಾರ್, ಮಂಜುನಾಥ ಹೆಬ್ಬಾರ, ನಾಗರಾಜ ಹೆಗಡೆ, ದಿನೇಶ ಪೂಜಾರಿ, ಆನಂದ ಶೆಟ್ಟಿ, ನಟರಾಜ ಉಪಾಧ್ಯಾಯ, ಡಾ. ಪ್ರತಿಮಾ ಜೆ. ಆಚಾರ್ಯ ಉಪಸ್ಥಿತರಿದ್ದರು.

ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳನ್ನಾಡಿದರು. ವಿಶ್ವಸ್ತರಾದ ವಿ.ಜಿ.ಶೆಟ್ಟಿ ಸ್ವಾಗತಿಸಿ, ವಿದ್ಯಾಪ್ರಸಾದ್ ವಂದಿಸಿದರು. ನಾರಾಯಣ ಎಂ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನೆಯ ಬಳಿಕ ವಿದ್ಯೋದಯ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳಿಂದ ‘ವೀರ ಅಭಿಮನ್ಯು’ ಹಾಗೂ ಕಡಿಯಾಳಿ ಯು. ಕಮಲಾ ಬಾಯಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ‘ಶ್ವೇತಕುಮಾರ’ ಯಕ್ಷಗಾನ ಪ್ರದರ್ಶನಗೊಂಡಿತು.

ಉಡುಪಿಯಲ್ಲಿ ಈ ಪ್ರದರ್ಶನ ಡಿ.2ರಿಂದ 18ರವರೆಗೆ ಪ್ರದಿನ ಸಂಜೆ ರಾಜಾಂಗಣದಲ್ಲಿ ನಡೆಯಲಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News