×
Ad

ಉಡುಪಿ | ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆ: ದಿಶಾ ಗಿರೀಶ್ ಪ್ರಥಮ

Update: 2025-12-03 18:24 IST

ಉಡುಪಿ, ಡಿ.3: ಹೆಜ್ಜೆ ಗೆಜ್ಜೆ ಫೌಂಡೇಶನ್ ಉಡುಪಿ ಮಣಿಪಾಲ ವತಿಯಿಂದ ರಾಷ್ಟ್ರಮಟ್ಟದ ಏಕವ್ಯಕ್ತಿ ಭರತನಾಟ್ಯ ಸ್ಪರ್ಧೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.

ಭಕ್ತಿ ನೃತ್ಯ ಸೌರಭ ಹೆಸರಿನಲ್ಲಿ ನಡೆದ ಈ ಸ್ಪರ್ಧೆಗೆ ಕರ್ನಾಟಕ, ತಮಿಳುನಾಡು, ಕೇರಳ ಮಹಾರಾಷ್ಟ್ರ ಮುಂತಾದ ರಾಜ್ಯಗಳ ಒಟ್ಟು 24 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ದಿಶಾ ಗಿರೀಶ್, ಮಂಗಳೂರು(ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಗಾನ ನೃತ್ಯ ಅಕಾಡೆಮಿ ಮಂಗಳೂರು) 10,000 ರೂ. ನಗದು, ಫಲಕದೊಂದಿಗೆ ಪ್ರಥಮ, ಅನಂತಕೃಷ್ಣ ಸಿ.ವಿ. ಮಂಗಳೂರು(ಗುರು ವಿದ್ಯಾಶ್ರೀ ರಾಧಾಕೃಷ್ಣ) 7,000 ರೂ. ನಗದಿನೊಂದಿಗೆ ದ್ವಿತೀಯ ಹಾಗೂ ಪ್ರಕೃತಿ ಪಿ.ಮೂಡುಬಿದಿರೆ(ವಿದುಷಿ ಸುಖದಾ ಬರ್ವೆ, ಆರಾಧನಾ ನೃತ್ಯ ಕೇಂದ್ರ ಮೂಡುಬಿದಿರೆ) 5000 ರೂ. ನಗದಿನೊಂದಿಗೆ ತೃತೀಯ ಬಹುಮಾನ ಪಡೆದರು.

ಸಮಾಧಾನಕರ ಬಹುಮಾನವನ್ನು ಶ್ರೇಷ್ಠಾ ಆರ್. ಉಡುಪಿ(ಗುರು ವಿದುಷಿ ಮಂಜರಿಚಂದ್ರ, ಸೃಷ್ಟಿ ನೃತ್ಯ ಕಲಾಕುಟೀರ, ಉಡುಪಿ)ಮತ್ತು ಯಶಸ್ವೀ ಸನಿಲ್ ಉಡುಪಿ (ಗುರು ವಿದ್ವಾನ್ ಭವಾನಿಶಂಕರ್, ಶ್ರೀಭ್ರಾಮರಿ ನಾಟ್ಯಾಲಯ ಅಮ್ಮುಂಜೆ, ಉಡುಪಿ) ಪಡೆದರು. ಪ್ರಥಮ ಬಹುಮಾನ ಪಡೆದ ದಿಶಾ ಗಿರೀಶ್ ಅವರಿಗೆ ನೃತ್ಯದಾಸರತ್ನ ಬಿರುದು ನೀಡಲಾಯಿತು.

ಸ್ಪರ್ಧೆಗೆ ನಿರ್ಣಾಯಕರಾಗಿದ್ದ ವಿದ್ವಾನ್ ಸುಜಯ್ ಶ್ಯಾನಭಾಗ್, ಹುಬ್ಬಳ್ಳಿ ಮತ್ತು ವಿದುಷಿ ಶ್ರೀರಂಜಿನಿ ಉಮೇಶ್ ಬೆಂಗಳೂರು ಸ್ಪರ್ಧೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿದ್ವಾನ್ ಸುಜಯ್ ಶ್ಯಾನಭಾಗ್ ಮತ್ತು ವಿದುಷಿ ಶ್ರೀರಂಜಿನಿ ಉಮೇಶ್ ಅವರನ್ನು ಸನ್ಮಾನಿಸಲಾಯಿತು.

ಹೆಜ್ಜೆ ಗೆಜ್ಜೆ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣ, ಸಹ ನಿರ್ದೇಶಕಿ ಹಾಗೂ ಸ್ಪರ್ಧೆಯ ಸಂಯೋಜಕಿ ವಿದುಷಿ ದೀಕ್ಷಾ ರಾಮಕೃಷ್ಣ, ಸಂಚಾಲಕ ಡಾ.ರಾಮಕೃಷ್ಣ ಹೆಗ್ಡೆ, ಸರಿಗಮ ಭಾರತಿ, ಪರ್ಕಳ ನಿರ್ದೇಶಕಿ ವಿದುಷಿ ಉಮಾ ಉದಯ ಶಂಕರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News