×
Ad

ಉಡುಪಿ | ರಂಗಭೂಮಿ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ : ಸುಮನಸಾ ಕೊಡವೂರು ‘ಈದಿ’ಗೆ ಪ್ರಥಮ ಬಹುಮಾನ

ಶಿವೋಹಂಗೆ ದ್ವಿತೀಯ, ಪ್ರಾಣಪದ್ಮಿನಿಗೆ ತೃತೀಯ ಬಹುಮಾನ

Update: 2025-12-05 21:03 IST

ಉಡುಪಿ, ಡಿ.5: ರಂಗಭೂಮಿ ಉಡುಪಿ ನ.23ರಿಂದ ಡಿ.4ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣಮಂಟಪದಲ್ಲಿ ಆಯೋಜಿಸಿದ್ದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಉಡುಪಿ ಕೊಡವೂರಿನ ಸುಮನಸಾ ತಂಡ ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಪ್ರದರ್ಶಿಸಿದ ‘ಈದಿ’ ನಾಟಕ ಪ್ರಥಮ ಬಹುಮಾನದೊಂದಿಗೆ ಪಿವಿಎಸ್ ಬೀಡೀಸ್ ಪ್ರಾಯೋಜಿತ ದಿ.ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ಬಹುಮಾನ 35,000 ರೂ. ನಗದು, ಸ್ಮರಣಿಕೆಯೊಂದಿಗೆ ಡಾ.ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ.

12 ದಿನಗಳ ಕಾಲ ನಿರಂತರವಾಗಿ ನಡೆದ ಸ್ಪರ್ಧೆಯಲ್ಲಿ ದಿ.ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ವರಾಜ್ ಕೊಡುಗೆಯಾದ 25,000 ರೂ. ನಗದು ಬಹುಮಾನ, ಸ್ಮರಣಿಕೆಯೊಂದಿಗೆ ಡಾ.ಆರ್.ಪಿ. ಕೊಪ್ಪಿಕರ್ ಸ್ಮಾರಕ ದ್ವಿತೀಯ ಬಹುಮಾನವು ಬೆಂಗಳೂರಿನ ಕ್ರಾನಿಕಲ್ಸ್ ಆಫ್ ಇಂಡಿಯಾ ತಂಡ ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಪ್ರದರ್ಶಿಸಿದ ‘ಶಿವೋಹಂ’ ನಾಟಕದ ಪಾಲಿಗಿದೆ.

ಸಾಗರದ ಸ್ಪಂದನಾ ತಂಡ ಮಂಜುನಾಥ ಎಲ್.ಬಡಿಗೇರ ರಚನೆ ಮತ್ತು ನಿರ್ದೇಶನದಲ್ಲಿ ಆಡಿದ ‘ಪ್ರಾಣಪದ್ಮಿನಿ’ ತೃತೀಯ ಬಹುಮಾನದೊಂದಿಗೆ ದಿ.ಪಿ.ವಾಸುದೇವ ರಾವ್ ಸ್ಮರಣಾರ್ಥ ಸೀತಾ ವಾಸುದೇವ ರಾವ್ ಕೊಡುಗೆ 15,000 ರೂ. ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ಗೆದ್ದುಕೊಂಡಿದೆ.

ಸ್ಪರ್ಧಾ ಕೂಟದಲ್ಲಿ ಉಳಿದ ವಿಜೇತರ ವಿವರ ಹೀಗಿದೆ :

ಶ್ರೇಷ್ಠ ನಿರ್ದೇಶನ :

ಪ್ರಥಮ : ವಿದ್ದು ಉಚ್ಚಿಲ್ (ನಾಟಕ ಈದಿ)ದಿ.ಕುತ್ಪಾಡಿ ವೆಂಕಟಾಚಲ ಭಟ್ ಸ್ಮಾರಕ ಹಾಗೂ ದಿ.ಜಿ.ಕೆ.ಐತಾಳ್ ಸ್ಮಾರಕ10,000 ರೂ. ನಗದು ಮತ್ತು ಡಾ.ಟಿಎಂಎಪೈ ಸ್ಮಾರಕ ಪರ್ಯಾಯ ಫಲಕ.

ದ್ವಿತೀಯ : ಗಣೇಶ ಮಂದಾರ್ತಿ (ಶಿವೋಹಂ), 6,000ರೂ.ನಗದು, ಸ್ಮರಣಿಕೆ.

ತೃತೀಯ : ಪುನೀತ್ ಎ.ಎಸ್. (ಬೆಂಗಳೂರಿನ ನೆನಪು ಕಲ್ಚರಲ್ ಮತ್ತು ಎಜ್ಯುಕೇಷನಲ್ ಚಾರಿಟೇಬಲ್ ಟ್ರಸ್ಟ್ ನ ಮಾಯಾ ದ್ವೀಪ ನಾಟಕ), 4,000ರೂ. ನಗದು.

ಶ್ರೇಷ್ಠ ನಟ :

ಪ್ರಥಮ:

ಶಿವೋಹಂ ನಾಟಕದ ಚನಿಯಣ್ಣ ಮತ್ತು ದೈವ ಪಾತ್ರಧಾರಿ ಮಂಜು ಕಾಸರಗೋಡು (3,000ರೂ.,ಸ್ಮರಣಿಕೆ).

ದ್ವಿತೀಯ : ಈದಿ ನಾಟಕದ ಮಹಮ್ಮದ್ ಪಾತ್ರಧಾರಿ ನಾಗೇಶ್ ಪ್ರಸಾದ್ (2000ರೂ., ಸ್ಮರಣಿಕೆ).

ತೃತೀಯ: ಸ್ಪಂದನಾ ಸಾಗರ ತಂಡದ ‘ಪ್ರಾಣಪದ್ಮಿನಿ’ ನಾಟಕದ ಅಜ್ಮಲ್ ಖಾನ್ ಪಾತ್ರಧಾರಿ ಕಾರ್ತಿಕ್ ಕೆ. (1,000ರೂ., ಸ್ಮರಣಿಕೆ).

ಶ್ರೇಷ್ಠ ನಟಿ :

ಪ್ರಥಮ: ಈದಿ ನಾಟಕದ ರೋಶ್ನಿ ಪಾತ್ರಧಾರಿ ಧೃತಿ ಸಂತೋಷ್ (3,000ರೂ, ಸ್ಮರಣಿಕೆ).

ದ್ವಿತೀಯ: ನೇಪಥ್ಯ ರಂಗ ತಂಡ ಮೈಸೂರು ‘ಒಡಲಾಳ’ ನಾಟಕದ ಸಾಕವ್ವ ಪಾತ್ರಧಾರಿ ಚೈತನ್ಯ ಶಿವನಂಜ (2,000ರೂ., ಸ್ಮರಣಿಕೆ).

ತೃತೀಯ: ಪ್ರಾಣಪದ್ಮಿನಿ ನಾಟಕದ ಪದ್ಮಿನಿ ಪಾತ್ರಧಾರಿ ಭೂಮಿ (1,000ರೂ., ಸ್ಮರಣಿಕೆ).

ಶ್ರೇಷ್ಠ ಸಂಗೀತ :

ಪ್ರಥಮ: ಶಿವೋಹಂ ನಾಟಕ ಗಣೇಶ ಮಂದಾರ್ತಿ (3,000ರೂ., ಸ್ಮರಣಿಕೆ).

ದ್ವಿತೀಯ: ಪ್ರಾಣಪದ್ಮಿನಿ ನಾಟಕದ ಭಾರ್ಗವ ಹೆಗ್ಗೋಡು ಮತ್ತು ಅರುಣ್ಕುಮಾರ್ (2,000ರೂ., ಸ್ಮರಣಿಕೆ).

ತೃತೀಯ: ಬೆಂಗಳೂರು ನೆನಪು ಕಲ್ಚರಲ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಮಾಯಾದ್ವೀಪ ನಾಟಕದ ಹರಿಪ್ರಸಾದ್ (1,000ರೂ, ಸ್ಮರಣಿಕೆ).

ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ :

ಶಿವೋಹಂ ನಾಟಕದ ಮನೋಜ್ ಮೂಕಹಳ್ಳಿ,ಮಧುಸೂದನ್, ಶಶಿಧರ್ (3,000ರೂ., ಸ್ಮರಣಿಕೆ).

ದ್ವಿತೀಯ: ಈದಿ ನಾಟಕದ ಎಚ್.ಕೆ.ದ್ವಾರಕಾನಾಥ್ (2,000ರೂ., ಸ್ಮರಣಿಕೆ).

ತೃತೀಯ: ಮಾಯಾ ದ್ವೀಪ ನಾಟಕದ ಪುನೀತ್,ಅರವಿಂದ್, ದಕ್ಷತ ರಂಗತಂಡ (1,000ರೂ., ಸ್ಮರಣಿಕೆ).

ಶ್ರೇಷ್ಠ ರಂಗ ಪ್ರಸಾಧನ :

ಶಿವೋಹಂನ ರಾಮಕೃಷ್ಣ ಕನ್ನರ್ಪಾಡಿ ಮತ್ತು ವಿಜ ಬೆಣಚ (3,000ರೂ., ಸ್ಮರಣಿಕೆ).

ದ್ವಿತೀಯ: ಬೆಂಗಳೂರಿನ ರೇವಾ ರಂಗ ಅಧ್ಯಯನ ಕೇಂದ್ರದ ದರ್ಶನಂ ನಾಟಕದ ಪೃಥ್ವೀಶ್ ಶೆಟ್ಟಿಗಾರ್ (2,000ರೂ., ಸ್ಮರಣಿಕೆ).

ತೃತೀಯ :ಮಾಯಾದ್ವೀಪ ನಾಟಕದ ವಿಜಯ ಬೆಣಚ ಮತ್ತು ತಂಡ (1,000ರೂ, ಸ್ಮರಣಿಕೆ).

ಶ್ರೇಷ್ಠ ರಂಗ ಬೆಳಕು :

ಪ್ರಥಮ: ಪ್ರಾಣಪದ್ಮಿನಿ ನಾಟಕದ ಜೀವನ್ಕುಮಾರ್ ಹೆಗ್ಗೋಡು.

ದ್ವಿತೀಯ: ಮಾಯಾದ್ವೀಪ ನಾಟಕದ ರವಿಶಂಕರ್.

ತೃತೀಯ: (ಇಬ್ಬರಿಗೆ), ಶಿವೋಹಂ ನಾಟಕದ ಪ್ರಥ್ವಿನ್ ಉಡುಪಿ ಹಾಗೂ ಈದಿ ನಾಟಕದ ಪ್ರವೀಣ್ಕುಮಾರ್.

ಶ್ರೇಷ್ಠ ಹಾಸ್ಯ ನಟನೆ :

ತೀರ್ಥಹಳ್ಳಿ ನಟಮಿತ್ರರು ಹವ್ಯಾಸಿ ಕಲಾ ಸಂಘದ ಆ ಊರು ಈ ಊರು ನಾಟಕದ ಆಚಾರು ಪಾತ್ರಧಾರಿ ಸುಬ್ರಹ್ಮಣ್ಯ ಜಿ. ಆರ್.

ಮೆಚ್ಚುಗೆ ಬಹುಮಾನ :

ಮಾಯಾದ್ವೀಪ ನಾಟಕದ ಶ್ರೀಮಹಾದೇವ, ಕಿಶೋರ್ಕುಮಾರ್, ಈದಿ ನಾಟಕದ ಅಕ್ಷತ್, ಪ್ರಾಣಪದ್ಮಿನಿ ನಾಟಕದ ವಿವೇಕ್ ನಾಯಕ್ ಬಿ.ಎಂ. ಹಾಗೂ ಬೆಂಗಳೂರಿನ ನಮ್ದೆ ನಟನೆ ತಂಡದ ಮಗಳೆಂಬ ಮಲ್ಲಿಗೆ ನಾಟಕ ಶ್ರೀನಾಥ್.

ಶ್ರೇಷ್ಠ ಬಾಲ ನಟನೆ :

ಗುಬ್ಬಿ ವೀರಣ್ಣ ಶಿಕ್ಷಣ ಸಮೂಹ ತುಮಕೂರು ತಂಡದ ಗೌತಮಬುದ್ಧ ನಾಟಕದ ರಾಹುಲ ಪಾತ್ರಧಾರಿ ರಾಘವ ಇವರಿಗೆ ಲಭಿಸಿದೆ.

46ನೆ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಅತ್ಯಂತ ಶಿಸ್ತಿನ ತಂಡವಾಗಿ ಗೌತಮಬುದ್ಧ ನಾಟಕ ಪ್ರದರ್ಶನ ನೀಡಿದ ತುಮಕೂರಿನ ಗುಬ್ಬಿ ವೀರಣ್ಣ ಶಿಕ್ಷಣ ಕಲಾ ತಂಡ ಆಯ್ಕೆಯಾಗಿದೆ. ತಂಡಕ್ಕೆ 5,000ರೂ. ನಗದು ಹಾಗೂ ಫಲಕವು ಲಭಿಸಿದೆ.

ಈ ಬಾರಿಯ ಸ್ಪರ್ಧೆಯ ತೀರ್ಪುಗಾರರಾಗಿ ಕೆ.ಜಿ. ಮಹಾಬಲೇಶ್ವರ, ನಟರಾಜ ಹೊನ್ನವಳ್ಳಿ, ರಾಮು ರಂಗಾಯಣ, ಗಣೇಶ್ಕುಮಾರ್ ಎಲ್ಲೂರು, ಶಶಿಕಲಾ ಜೋಶಿ ಸಹಕರಿಸಿದ್ದರು.

ಪ್ರಶಸ್ತಿ ಪ್ರದಾನ :

ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು 46ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ 2026ರ ಜನವರಿ ತಿಂಗಳ ಕೊನೆಯಲ್ಲಿ ಉಡುಪಿ ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿರುವ ರಂಗಭೂಮಿ ರಂಗೋತ್ಸವದಲ್ಲಿ ನೀಡಲಾಗುವುದು.

ಕಾರ್ಯಕ್ರಮದ ಕೊನೆಗೆ ಈ ಬಾರಿ ಪ್ರಥಮ ಪ್ರಶಸ್ತಿ ಪುರಸ್ಕೃತ ಸುಮನಸಾ ಕೊಡವೂರು ತಂಡದ ‘ಈದಿ’ ನಾಟಕದ ಮರು ಪ್ರದರ್ಶನ ಇರುತ್ತದೆ ಎಂದು ರಂಗಭೂಮಿ ಉಡುಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News