×
Ad

ತಂಝೀಮ್‌ ಚುನಾವಣೆಯಲ್ಲಿ ಯುವಕರ ಮೇಲುಗೈ; ಕಾರ್ಯಕಾರಿ ಸಮಿತಿಗೆ ಶೇ.50ಕ್ಕೂ ಹೆಚ್ಚು ಹೊಸ ಮುಖಗಳ ಆಯ್ಕೆ

Update: 2026-05-13 18:56 IST

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಾಮಾಜಿಕ ಸಂಘಟನೆ ಮಜ್ಲಿಸ್‌ಎ-ಇಸ್ಲಾಹ್‌ವ ತಂಝೀಮ್‌ನ ತ್ರೈವಾರ್ಷಿಕ ಚುನಾವಣೆಯಲ್ಲಿ ಈ ಬಾರಿ ಕಾರ್ಯಕಾರಿ ಸಮಿತಿಗೆ ಶೇ.50ಕ್ಕೂ ಹೆಚ್ಚು ಹೊಸ ಮುಖಗಳು ಆಯ್ಕೆಯಾಗಿದ್ದು, ಯುವಕರಿಗೆ ಹೆಚ್ಚಿನ ಅವಕಾಶ ದೊರೆತಿದೆ.

ಮೇ 12ರಂದು ಭಟ್ಕಳದ ವಿವಿಧ ಭಾಗಗಳಲ್ಲಿ ಎಂಟು ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 24 ಸದಸ್ಯರು ಆಯ್ಕೆಯಾಗಿದ್ದಾರೆ. ಏಳು ಕ್ಷೇತ್ರಗಳಿಂದ 20 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

14ನೇ ಕ್ಷೇತ್ರದಲ್ಲಿ ಹೆಚ್ಚು ಪೈಪೋಟಿ ಕಂಡುಬಂದಿದ್ದು, ಐದು ಸ್ಥಾನಗಳಿಗೆ 10 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾರ್ಗದ್ದೆಯ ಅಲ್‌ಫಲಾಹ್‌ಸ್ಪೋರ್ಟ್ಸ್‌ಸೆಂಟರ್‌ನಲ್ಲಿ ನಡೆದ ಮತದಾನದಲ್ಲಿ ಶೇ.75.43ರಷ್ಟು ಮತದಾನ ದಾಖಲಾಗಿದೆ.

132 ಸದಸ್ಯರ ಕಾರ್ಯಕಾರಿ ಮಂಡಳಿಗೆ ಭಟ್ಕಳ ಸೇರಿದಂತೆ ವಿವಿಧ ಭಾಗಗಳಿಂದ ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ.

ಚುನಾವಣಾ ಆಯುಕ್ತ ಮೊಹಿದ್ದೀನ್‌ ಅಲ್ತಾಫ್‌ ಖಾರೂರಿ ಮಾತನಾಡಿ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಸದಸ್ಯರು ಕಾರ್ಯಕಾರಿ ಸಮಿತಿಗೆ ಸೇರ್ಪಡೆಯಾಗಿರುವುದು ಸಂಘಟನೆಯಲ್ಲಿ ಹೊಸ ಉತ್ಸಾಹ ಮೂಡಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News