Harapanahalli | ನಬಾರ್ಡ್ ಯೋಜನೆಯಡಿ ಫಲಾನುಭವಿಗೆ ಟ್ರ್ಯಾಕ್ಟರ್ ವಿತರಿಸಿದ ಶಾಸಕಿ ಲತಾ ಮಲ್ಲಿಕಾರ್ಜುನ
ಹರಪನಹಳ್ಳಿ: ನಗರದ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಆವರಣದಲ್ಲಿ ಸೋಮವಾರ ನಬಾರ್ಡ್ ಯೋಜನೆಯಡಿ ಆಯೋಜಿಸಿದ್ದ ಟ್ರ್ಯಾಕ್ಟರ್ ವಿತರಣಾ ಸಮಾರಂಭದಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಭಾಗವಹಿಸಿ ಫಲಾನುಭವಿಗೆ ಟ್ರ್ಯಾಕ್ಟರ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ರೈತರಿಗೆ ಅಗತ್ಯವಿರುವ ಆಧುನಿಕ ಕೃಷಿ ಉಪಕರಣಗಳು ಹಾಗೂ ಯಂತ್ರೋಪಕರಣಗಳನ್ನು ಒದಗಿಸುವುದು ಅತ್ಯಂತ ಮಹತ್ವದ್ದಾಗಿದೆ. ಇಂತಹ ಯೋಜನೆಗಳು ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಕೃಷಿ ಕಾರ್ಯಗಳನ್ನು ಸುಗಮಗೊಳಿಸಲು ಸಹಕಾರಿಯಾಗಲಿವೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಅವರ ಸಮ್ಮುಖದಲ್ಲಿ ಬ್ಯಾಂಕಿನ ನವೀಕರಣಗೊಂಡ ಅಧ್ಯಕ್ಷರ ಕೊಠಡಿಯನ್ನು ಉದ್ಘಾಟಿಸಿ ಅಧಿಕೃತವಾಗಿ ಕಾರ್ಯಾರಂಭಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಕನಕನ ಬಸ್ಸಾಪುರ ಕೆ. ಮಂಜುನಾಥ, ಉಪಾಧ್ಯಕ್ಷೆ ತೊಗರಿಕಟ್ಟೆ ಶಕುಂತಲಾ, ನಿರ್ದೇಶಕರಾದ ಪಿ.ಎಲ್. ಪೋಮ್ಯ ನಾಯ್ಕ್, ಗೊಂಗಡಿ ನಾಗರಾಜ್, ಪಿ.ಬಿ. ಗೌಡ, ಬೇಲೂರು ಸಿದ್ದೇಶ್, ಸಾಬಳ್ಳಿ ಜಂಬಣ್ಣ, ರೆಡ್ಡಿ ಶಾಂತಕುಮಾರ್, ಲಾಟಿ ದಾದಾಪೀರ್, ಭರಮಗೌಡ, ಭರ್ಮಪ್ಳ ರಾಜಕುಮಾರ್, ಡಿ. ಕಾಶೀನಾಥ, ಚಿದಾನಂದಸ್ವಾಮಿ, ಕೆ. ಸೌಭಾಗ್ಯಮ್ಮ, ಹೆಚ್. ಭೀಮಪ್ಪ, ಬ್ಯಾಂಕ್ ವ್ಯವಸ್ಥಾಪಕ ಶಾಹಿದ್ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.