ಕೊಟ್ಟೂರು (ವಿಜಯನಗರ): ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಕೊಟ್ಟೂರು ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ವೇದಿಕೆ ಕಾರ್ಯಕ್ರಮವನ್ನು ಆಯೋಜಿಸದೆ, ತಾಲೂಕು ಪಂಚಮಸಾಲಿ ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆ ನಡೆಸಲಾಯಿತು. ಗ್ರೇಡ್-2 ತಹಶೀಲ್ದಾರ್ ಎಂ. ಪ್ರತಿಭಾ ಅವರು ರಾಣಿ ಚನ್ನಮ್ಮಾಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಚಾಪಿ ಚಂದ್ರಪ್ಪ, ಪಂಚಮಸಾಲಿ ಬ್ಯಾಂಕ್ ಅಧ್ಯಕ್ಷ ವಿವೇಕಾನಂದ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವರಮನಿ ಕೊಟ್ರೇಶ, ಮುಖಂಡರಾದ ನಿಂಬಳಗೇರಿ ಕಲ್ಲೇಶಪ್ಪ, ನಾಗರಕಟ್ಟೆ ರಾಜಣ್ಣ, ಶಿರಸ್ತೇದಾರ್ ಎಸ್. ರೇಖಾ, ಸಿಬ್ಬಂದಿ ಡಿ.ಎ. ಮಂಜಮ್ಮ, ದೇವರಾಜ ಅರಸು, ಎಂ.ಎಸ್. ಮೇಟಿ, ಸಿ.ಎಂ. ಗುರುಬಸವರಾಜ, ಗ್ರಾಮ ಆಡಳಿತ ಅಧಿಕಾರಿ ಹರೀಶ್, ಶರಣ ಬಸವೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor