1000 ಕಿಮೀ ವ್ಯಾಪ್ತಿಯ El Nino ಬೆಳವಣಿಗೆ; ಪೆಸಿಫಿಕ್ ಸಾಗರದಲ್ಲಿ ಬೃಹತ್ ನೀರಿನ ಗೋಡೆ ಗೋಚರ!
Photo Credit : NASA
ಉಪಗ್ರಹಗಳ ವಿವರಗಳನ್ನು ಗಮನಿಸಿದಲ್ಲಿ ಪೆಸಿಫಿಕ್ ಮಹಾಸಾಗರದಾದ್ಯಂತ ಬೆಚ್ಚಗಿನ ನೀರಿನ ಗೋಡೆಯು ಚಲಿಸುತ್ತಿದೆ. ಈ ಪ್ಯಾಟರ್ನ್ಗಳನ್ನು ವಿಶ್ಲೇಷಿಸಿರುವ ವಿಜ್ಞಾನಿಗಳು ʼಎಲ್ ನಿನೋʼ ಹವಾಮಾನ ಬೆಳವಣಿಗೆ ನಿರ್ಮಾಣವಾಗುತ್ತಿರುವ ಬಲವಾದ ಆರಂಭಿಕ ಸಂಕೇತ ಎಂದು ಹೇಳುತ್ತಾರೆ. ಈ ಎಲ್ ನಿನೋ ಬೆಳವಣಿಗೆ ಈ ವರ್ಷದ ಕೊನೆಯಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಮಳೆಯ ಮಾದರಿಗಳು ಮತ್ತು ತಾಪಮಾನದ ಮೇಲೆ ಪರಿಣಾಮ ಬೀರಬಹುದು ಎಂದು ವರದಿಯಾಗಿದೆ.
ಎಲ್ ನಿನೊ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದೆಯೆ?
2026ರ ಎಲ್ ನಿನೊ ಬೆಳವಣಿಗೆಗಳ ಬಗ್ಗೆ ಹೆಚ್ಚು ವರದಿಯಾಗುತ್ತಿದೆ. ಅನೇಕ ಮುನ್ಸೂಚನೆಗಳ ಪ್ರಕಾರ ವರ್ಷದ ಅಂತ್ಯದಲ್ಲಿ ಪರಿಣಾಮ ತಿಳಿದುಬರಲಿದೆ. ವಿಶ್ವಾದ್ಯಂತ ಹವಾಮಾನ ಶಾಸ್ತ್ರಜ್ಞರು ಹೇಳುವ ಚಿಹ್ನೆಗಳನ್ನು ಗಮನಿಸಿದರೆ ಎಲ್ ನಿನೊ ಭವಿಷ್ಯವಾಣಿ ಪ್ರತಿದಿನ ವಿಶ್ವಾಸಾರ್ಹವಾಗುತ್ತಾ ಸಾಗುತ್ತಿದೆ.
ಪೆಸಿಫಿಕ್ ಮಹಾಸಾಗರಕ್ಕೆ ಸಂಬಂಧಿಸಿದ ಹವಾಮಾನ ಬೆಳವಣಿಗೆಗಳನ್ನು ವಿವರಿಸುವಲ್ಲಿ ಜಾಗತಿಕವಾಗಿ ಪ್ರಸಿದ್ಧಿಪಡೆದಿರುವ ಆಸ್ಟ್ರೇಲಿಯದ ಹವಾಮಾನ ಮಂಡಳಿ (BOM) ಜೂನ್ ವೇಳೆಗೆ ಎಲ್ ನಿನೊ ಆಗಮಿಸುವ ಸಾಧ್ಯತೆಯಿದೆ ಎಂದಿದೆ. ಈ ಕುರಿತಂತೆ ನೈಜ ವಿವರಗಳನ್ನು ನಾಸಾ-ಯುರೋಪಿಯನ್ ಉಪಗ್ರಹವು ಸೆರೆಹಿಡಿದಿದೆ.
ಸೆಂಟಿನಲ್- 6 ಮೈಕೆಲ್ ಫ್ರೆಲಿಚ್ ಉಪಗ್ರಹವನ್ನು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ನೇತೃತ್ವದಲ್ಲಿ ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ಕಾರ್ಯಕ್ರಮದ ಭಾಗವಾಗಿ ಉಡಾಯಿಸಲಾಗಿತ್ತು. ಇದು ಪ್ರತಿ ಹತ್ತು ದಿನಗಳಿಗೊಮ್ಮೆ ಸಾಗರಾದ್ಯಂತ ನೀರಿನ ಎತ್ತರ ಅಳೆದು ನಕ್ಷೆ ಮಾಡುತ್ತದೆ. ಅತ್ಯಾಧುನಿಕ ಉಪಗ್ರಹವು ಸಮುದ್ರ ಮಟ್ಟದ ಬದಲಾವಣೆ ಪತ್ತೆ ಮಾಡುವ ಮೂಲಕ ತಾಪಮಾನವನ್ನು ತಿಳಿದುಕೊಳ್ಳಬಹುದು. ಏಕೆಂದರೆ ಬೆಚ್ಚಗಿನ ನೀರು ವಿಸ್ತಾರಗೊಳ್ಳುತ್ತದೆ ಮತ್ತು ಎತ್ತರದಲ್ಲಿರುತ್ತದೆ.
ಸಮುದ್ರದ ಮುನ್ಸೂಚನೆ ಏನು?
ಈ ಬಾರಿ ಉಪಗ್ರಹದ ಕಣ್ಣಿಗೆ ಬಿದ್ದಿರುವುದು ಕೆಲ್ವಿನ ತರಂಗ. ಈ ತರಂಗವು ಸಮಭಾಜಕದ ಉದ್ದಕ್ಕೂ ಪೂರ್ವಕ್ಕೆ ಚಲಿಸುವ ಬೆಚ್ಚಗಿನ ನೀರಿನ ಬೃಹತ್ ನೀರಿನೊಳಗಿನ ಅಲೆಯಾಗಿರುತ್ತದೆ. ದೂರದ ಪಶ್ಚಿಮ ಪೆಸಿಫಿಕ್ ಮೇಲೆ ಗಾಳಿಯು ತಾತ್ಕಾಲಿಕವಾಗಿ ದಿಕ್ಕನ್ನು ಬದಲಿಸಿದ ನಂತರ ಅಲೆಗಳು ರೂಪುಗೊಂಡ ಕಾರಣ ಪಶ್ಚಿಮ ಉಷ್ಣವಲಯದ ನೀರು ಬೆಚ್ಚಗಾಗಿ ಸಮುದ್ರ ಮಟ್ಟ ಏರುತ್ತದೆ. ನಂತರ ಅಲೆಯು ಹಲವಾರು ವಾರಗಳವರೆಗೆ ಪೂರ್ವಕ್ಕೆ ಚಲಿಸಿ, ಅಂತಿಮವಾಗಿ ದಕ್ಷಿಣ ಅಮೆರಿಕದ ಕರಾವಳಿಯ ನೀರನ್ನು ಬೆಚ್ಚಗಾಗಿಸುತ್ತದೆ.
ಎಲ್ ನಿನೊ ಅನೇಕ ತಿಂಗಳುಗಳಲ್ಲಿ ಅಂತಹ ಅಲೆಗಳು ಬರುವುದರಿಂದ ಬೆಳೆಯುತ್ತದೆ. ಹೀಗಾಗಿ ಕೊಲಂಬಿಯ, ಈಕ್ವೆಡಾರ್ ಮತ್ತು ಪೆರುವಿನ ಕರಾವಳಿಯಲ್ಲಿ ಬೆಚ್ಚಗಿನ ನೀರು ಸಂಗ್ರಹವಾಗುತ್ತದೆ. ಅಲ್ಲದೆ, ಅನಿಯಮಿತ ಮತ್ತು ಶುಷ್ಕ ಹವಾಮಾನದ ಸ್ಥಿತಿಯಲ್ಲಿ ವಿಶ್ವಾದ್ಯಂತ ಅಲೆಗಳನ್ನು ಉಂಟು ಮಾಡುತ್ತದೆ.
ಸೆಂಟಿನಲ್ 6ನ ಅಳತೆಯು ಜನವರಿ ಅಂತ್ಯದಲ್ಲಿ ಸಣ್ಣ ಕೆಲ್ವಿನ್ ಅಲೆ ರೂಪುಗೊಳ್ಳುವುದನ್ನು ತೋರಿಸಿವೆ. ಮಾರ್ಚ್ ಆರಂಭದಲ್ಲಿ ಹೊಸ ಅಲೆ ಹೊರಹೊಮ್ಮಿ ಪೂರ್ವಕ್ಕೆ ತಿರುಗಿತ್ತು. ಮೇ ಮಧ್ಯದ ವೇಳೆಗೆ ಪೆರುವಿನ ಸುತ್ತಲಿನ ಸಮುದ್ರಗಳು ಸರಾಸರಿಗಿಂತ 15 ಸೆಂಟಿಮೀಟರ್ ಎತ್ತರದಲ್ಲಿದ್ದವು.
ಹೀಗಾಗಿ ಮಾದರಿ ವಿಶ್ವಾಸಾರ್ಹವಾಗಿದೆ. “ಈ ವರ್ಷ 2015 ಮತ್ತು 1997ಗೆ ಹೋಲಿಸಿದರೆ ತಡವಾಗಿ ಪ್ರಾರಂಭವಾಗಿದೆ. ಮತ್ತೆ ವೇಗ ಪಡೆದುಕೊಳ್ಳಲು ಪ್ರಾರಂಭಿಸಲಿದೆ. ಆಗಲೇ ಎಷ್ಟು ದೊಡ್ಡದಾಗಲಿದೆ ಎಂದು ತಿಳಿಯಲಿದೆ” ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಭಾರತ ʼಎಲ್ ನಿನೊʼ ಬಗ್ಗೆ ಚಿಂತಿಸಬೇಕೆ?
ಎಲ್ ನಿನೊ ಕೇವಲ ಪೆಸಿಫಿಕ್ ಮಹಾಸಾಗರಕ್ಕೆ ಸೀಮಿತವಾಗಿಲ್ಲ. ಮಧ್ಯ ಮತ್ತು ಪೂರ್ವ ಪೆಸಿಫಿಕ್ನ ಬೆಚ್ಚಗಿನ ಸಮುದ್ರ ಮೇಲ್ಮೈ ತಾಪಮಾನವು ಜಾಗತಿಕವಾಗಿ ಬಿರುಗಾಳಿಗಳ ಮೇಲೆ ಪರಿಣಾಮ ಬೀರಿ ಮಳೆಯ ಮಾದರಿ ಬದಲಿಸುತ್ತದೆ. ಬರ ಮತ್ತು ಪ್ರವಾಹದಂತಹ ಪರಿಣಾಮಗಳು ಉಷ್ಣವಲಯದ ಪೆಸಿಫಿಕ್ ಮತ್ತು ಸುತ್ತಲೂ ಇರುತ್ತವೆ.
ಐತಿಹಾಸಿಕವಾಗಿ ಎಲ್ ನಿನೋ ಇರುವ ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚು ಮಳೆಯಾಗುವುದಿಲ್ಲ. ಕೃಷಿ ಮತ್ತು ನೀರಿನ ಲಭ್ಯತೆ ಮೇಲೆ ಪರಿಣಾಮ ಬೀರುತ್ತದೆ. ಭಾರತ ಈಗಾಗಲೇ ತೀವ್ರ ಶಾಖ ಮತ್ತು ನೀರಿನ ಕೊರತೆ ಎದುರಿಸುತ್ತಿದೆ.
ಎಲ್ ನಿನೊ ಸಾಮಾನ್ಯವಾಗಿ ನವೆಂಬರ್ ಮತ್ತು ಜನವರಿ ನಡುವೆ ಉತ್ತುಂಗದಲ್ಲಿರುತ್ತವೆ. ಅಂದರೆ ಪರಿಣಾಮಗಳ ಪೂರ್ಣ ಪ್ರಮಾಣವು ಇನ್ನೂ ಅನೇಕ ತಿಂಗಳವರೆಗೆ ಸ್ಪಷ್ಟವಾಗಿಲ್ಲ. ಪ್ರತಿ ಎಲ್ ನಿನೊ ಭಿನ್ನವಾಗಿದ್ದರೂ, ಯಾವಾಗಲೂ ಬಿಸಿ ವರ್ಷ ಮತ್ತು ಜಗತ್ತಿನ ಕೆಲವು ಭಾಗಗಳಲ್ಲಿ ಮಳೆಯಲ್ಲಿ ದೊಡ್ಡ ಬದಲಾವಣೆ ತರುತ್ತವೆ.
ಕೃಪೆ: ndiatoday.in