ಫಿಫಾ ವಿಶ್ವಕಪ್ ಸ್ಟಾರ್ ಅರ್ಲಿಂಗ್ ಹಾಲೆಂಡ್ ಗೆ ಭಾರತೀಯ ಆಹಾರವೇ ಅಚ್ಚುಮೆಚ್ಚು; ಅವರಿಗೆ ಇಷ್ಟವಾಗುವ ಖಾದ್ಯಗಳು ಯಾವುವು?
ಅರ್ಲಿಂಗ್ ಹಾಲೆಂಡ್ | Photo Credit : AP , PTI
ಹಾಲಂಡ್ ಮೈದಾನದಲ್ಲಿ ತಮ್ಮ ಆಟಕ್ಕೆ ಜಾಗತಿಕವಾಗಿ ಪ್ರಸಿದ್ಧಿ ಪಡೆದರೆ ಭಾರತದ ಆಹಾರ ತಮಗಿಷ್ಟ ಎಂದು ಹೇಳುವ ಮೂಲಕ ಭಾರತದಲ್ಲೂ ಸುದ್ದಿಯಾಗಿದ್ದಾರೆ.
ಸೆನೆಗಲ್ ವಿರುದ್ಧದ ಎರಡು ಪಂದ್ಯದಲ್ಲಿ ಎರಡು ಗೋಲು ಗಳಿಸುವ ಮೂಲಕ ನಾರ್ವೆಯ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ ಫಿಫಾ ವಿಶ್ವಕಪ್ 2026ರಲ್ಲಿ ತಮ್ಮ ಅತ್ಯಾಕರ್ಷಕ ಆಟ ಮುಂದುವರಿಸಿದ್ದಾರೆ. ಈ ಗೋಲು ನಾರ್ವೆ ನಾಕೌಟ್ ಹಂತಕ್ಕೆ ಸ್ಥಾನ ಪಡೆಯಲು ನೆರವಾಗಿದೆ. ಗೋಲ್ಡನ್ ಬೂಟ್ ರೇಸ್ ನಲ್ಲಿ ಅವರ ಸ್ಥಾನವೂ ಇರುವುದನ್ನು ಖಚಿತಪಡಿಸಿದೆ. ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಗೋಲುಗಳಿಸಿದ ಫಿಫಾ ವಿಶ್ವಕಪ್ ಇತಿಹಾಸದ ಆರನೇ ಆಟಗಾರನಾಗಿದ್ದಾರೆ.
ಹಾಲಂಡ್ ಮೈದಾನದಲ್ಲಿ ತಮ್ಮ ಆಟಕ್ಕೆ ಜಾಗತಿಕವಾಗಿ ಪ್ರಸಿದ್ಧಿ ಪಡೆದರೆ ಭಾರತದ ಆಹಾರ ತಮಗಿಷ್ಟ ಎಂದು ಹೇಳುವ ಮೂಲಕ ಭಾರತದಲ್ಲೂ ಸುದ್ದಿಯಾಗಿದ್ದಾರೆ. ಪ್ರೀಮಿಯರ್ ಲೀಗ್ ಇಂಡಿಯಾ ಇನ್ಸ್ಟಾಗ್ರಾಂ ಖಾತೆ ಹಂಚಿಕೊಂಡಿರುವ ವೀಡಿಯೋ ಕ್ಲಿಪ್ ಒಂದರಲ್ಲಿ ಅವರು ಭಾರತದ ಆಹಾರವನ್ನು ಪ್ರಶಂಸಿಸಿದ್ದಾರೆ. “ನನಗೆ ಭಾರತೀಯ ಆಹಾರ ಇಷ್ಟವಾಗುತ್ತದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಲ್ಯಾಂಬ್ ಚಾಪ್ಸ್, ಬಟರ್ ಚಿಕನ್ ಮತ್ತು ಗಾರ್ಲಿಕ್ ನಾನ್ ನನ್ನ ಪ್ರಿಯವಾದ ಆಹಾರ” ಎಂದು ಹೇಳಿದ್ದಾರೆ.
ಹಾಲಂಡ್ ಅವರ ಆಹಾರ ಪದ್ಧತಿ ಇತರ ಆಟಗಾರರಿಂದ ಭಿನ್ನವಾಗಿರುವುದು ಕುತೂಹಲವನ್ನು ಹುಟ್ಟುಹಾಕಿದೆ. ವರದಿಗಳ ಪ್ರಕಾರ ಸ್ಟ್ರೈಕರ್ ತನ್ನ ಕಾರ್ಯವೈಖರಿಗೆ ತಕ್ಕ ಪೌಷ್ಠಿಕಾಂಶದ ಆಹಾರ ಸೇವಿಸುತ್ತಾರೆ. ತಮ್ಮ ತರಬೇತಿ ಮತ್ತು ಫಿಟ್ನೆಸ್ಗಾಗಿ ನಿತ್ಯವೂ 6000 ಕ್ಯಾಲರಿಗಳನ್ನು ಅವರು ಸೇವಿಸುತ್ತಾರೆ. ಅದರಲ್ಲಿ ಆರ್ಗನ್ ಮೀಟ್ ಕೂಡ ಸೇರಿದೆ.