ಹುಣಸಗಿ | ಶ್ರಾವಣದಲ್ಲಿ ಪುರಾಣ ಪ್ರವಚನ ಆಲಿಸಿ ಧರ್ಮಾಚರಣೆ ರೂಢಿಸಿಕೊಳ್ಳಿ: ವೃಷಬೇಂದ್ರ ಮಹಾಸ್ವಾಮೀಜಿ

Update: 2026-08-18 19:02 IST

ಹುಣಸಗಿ: ಜೀವನದ ಜಂಜಾಟದ ನಡುವೆಯೂ ಪ್ರತಿಯೊಬ್ಬರೂ ಶ್ರಾವಣ ಮಾಸದಲ್ಲಿ ನಡೆಯುವ ಪುರಾಣ ಪ್ರವಚನಗಳನ್ನು ಆಲಿಸಿ, ಧರ್ಮಾಚರಣೆಯೊಂದಿಗೆ ಕಾಯಕದಲ್ಲಿ ತೊಡಗಿಕೊಳ್ಳಬೇಕು ಎಂದು ಕೊಡೇಕಲ್ ಬಸವ ಪರಂಪರೆಯ ಮಹಲಿನಮಠದ ವೃಷಬೇಂದ್ರ ಮಹಾಸ್ವಾಮೀಜಿ ಹೇಳಿದರು.

ಕೊಡೇಕಲ್ ಬಸವಣ್ಣನವರ ಸುಪುತ್ರ ರಾಚಪ್ಪಾಜಿಯವರು ವಿರಚಿಸಿದ ‘ಮಾಯಾ ಸಾಂಗತ್ಯ’ ಅಕ್ಕಮಹಾದೇವಿಯವರ ಚರಿತ್ರೆ ಕುರಿತ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಪುರಾಣಕಾರರಾಗಿ ವೀರೇಶ ಮುತ್ತಗಿ ಪುರಾಣ ಪಠಿಸಿದರು. ವಿಜಯಪುರದ ಸಿಕ್ಯಾಬ್ ಕಾಲೇಜಿನ ನಿವೃತ್ತ ಉಪನ್ಯಾಸಕ ಐ.ಜಿ. ಕೊಡೇಕಲ್‌ಮಠ ಅವರು ಪುರಾಣದ ವಿಶ್ಲೇಷಣೆಯೊಂದಿಗೆ ಪ್ರವಚನ ನೀಡಿದರು. ಸಂಗೀತ ಬಳಗದಲ್ಲಿ ರಾಜನಕೋಳೂರಿನ ಆಕಾಶವಾಣಿ ಕಲಾವಿದ ಆಮಯ್ಯ ಎಲ್. ಮಠ, ದೇವರಾಜ ಹೂಗಾರ ಹಾಗೂ ನಾಗರಾಜ ಹೂಗಾರ ತಬಲಾ ಸಾಥ್ ನೀಡಿದರು.

ಹಿರಿಯರಾದ ಪ್ರಭುಸ್ವಾಮಿ, ಶಾಮಸುಂದರ ಜೋಷಿ, ಚಂದ್ರಶೇಖರ ಹಾವೇರಿ, ಈರಸಂಗಯ್ಯ ಮಠ, ಬಸವರಾಜ ಗೋನಟ್ಲ, ಡಾ. ಜಿ.ಎಸ್. ಪಂಜಗಲ್, ತಿಪ್ಪಣ್ಣ ದ್ಯಾಮನಾಳ, ಬಸವರಾಜ ರಾಮನಗೌಡ್ರ, ರಂಗನಾಥ ದೊರಿ, ಬಸವರಾಜ ಪಂಜಗಲ್ ಹಾಗೂ ಗುರುಬಸ್ಸು ಪಂಜಗಲ್ ಉಪಸ್ಥಿತರಿದ್ದರು.

ಪುರಾಣ ಪ್ರವಚನವು ಪ್ರತಿದಿನ ಸಂಜೆ 7.30ಕ್ಕೆ ನಡೆಯಲಿದ್ದು, ಗಣೇಶ ಚತುರ್ಥಿಯವರೆಗೆ ಮುಂದುವರಿಯಲಿದೆ ಎಂದು ಸಮಿತಿ ತಿಳಿಸಿದೆ.

ಬಸವರಾಜಯ್ಯ ಅಪ್ಪ ಸಂಗೀತ ಪಾಠಶಾಲೆಯ ಮಕ್ಕಳು ಪ್ರಾರ್ಥಿಸಿದರು. ಕೋರಿಸಂಗಯ್ಯ ಗಡ್ಡದ ನಿರೂಪಿಸಿದರು. ಬಸವರಾಜ ಕೆಂಡದ ಸ್ವಾಗತಿಸಿದರು. ಪ್ರಭು ಪೂಜಾರಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News