ಯಾದಗಿರಿ| ಪರಿಶಿಷ್ಟ ಪಂಗಡಕ್ಕೆ ಅನ್ಯಾಯ: ಸರಕಾರದ ವಿರುದ್ಧ ವಾಲ್ಮೀಕಿ ಸಮಾಜದಿಂದ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ
ಯಾದಗಿರಿ: ಪರಿಶಿಷ್ಟ ವರ್ಗಕ್ಕೆ ಅನ್ಯಾಯ ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತಡೆಗಟ್ಟುವಲ್ಲಿ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳದೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ನಾಯಕ ಸಮಾಜದ ಉತ್ತರ ಕರ್ನಾಟಕ ಅಧ್ಯಕ್ಷರಾದ ಮಾರೆಪ್ಪ ನಾಯಕ ಮಗದಂಪೂರ ನೇತೃತ್ವದಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಪರಿಶಿಷ್ಟ ಜಾತಿಗೆ 15% ರಿಂದ 17% ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ 3% ರಿಂದ7% ಮೀಸಲಾತಿಯನ್ನು ಹೆಚ್ಚಿಸಿರುವದನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೆಲ ಮೀಸಲಾತಿ ವಿರೋಧಿ ವ್ಯಕ್ತಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿದ್ದರು. ನ್ಯಾಯಲಯ ಸುದೀರ್ಘವಾಗಿ ವಾದ ವಿವಾದಗಳು ಆಲಿಸಿ ಕೊನೆಯದಾಗಿ 2026ರ ಅ.12ರಂದು ರಂದು 50% ಮೀಸಲಾತಿಯನ್ನು ಮೀರಬಾರದು ಎಂದು ತೀರ್ಪು ನೀಡಿದೆ. ಈ ತೀರ್ಪಿನಿಂದ ಎಸ್ ಸಿ /ಎಸ್ ಟಿ ಜನಾಂಗಕ್ಕೆ ಅನ್ಯಾಯವಾಗಿದ್ದು ಈ ಒಂದು ತೀರ್ಪು ಈ ಜನಾಂಗಗಳಿಗೆ ಮರಣ ಶಾಸನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಶರಣಪ್ಪ ಜಾಲಹಳ್ಳಿ, ದೊಡ್ಡಯ್ಯ ನಾಯಕ ಹಳಿಗೇರ, ಅಂಬುರಾಜ್ ನಾಯಕ, ಲಕ್ಷ್ಮಣ ನಾಯಕ ಜಿನಕೆರಾ, ರಘುಪತಿ ಗೌಡಗೇರ, ಶರಣು ನಾಯಕ ನಗಲಪುರ್, ಬಸವರಾಜ್ ದೊರೆ ಗೌಡಗೇರ, ರಾಮಚಂದ್ರ ಗೌಡ, ಮಲ್ಲಿಕಾರ್ಜುನ್ ಗೌಡಗೇರಿ, ಸದಾಶಿವ ನಾಯಕ್, ಸಾಬು ನಾಯಕ ನೀಲ್ಹಳ್ಳಿ, ದೇವೇಂದ್ರ ನಾಯಕ್ ವರ್ಕನಳ್ಳಿ, ಸಾಬಯ್ಯ ಬಳಿಚಕ್ರ, ಸುಭಾಷ್ ನಾಯಕ ವರ್ಕನಳ್ಳಿ, ಭೀಮಣ್ಣ ನಾಯಕ ವರ್ನಹಳ್ಳಿ, ಮಹೇಶ್ ಕೂಡ್ಲೂರು, ಹರ್ಷವರ್ಧನ್ ಮುದ್ನಾಳ, ಶಶಾಂಕ್ ನಾಯಕ, ಈಶಪ್ಪ ನಾಯಕ ಹೇಡಗಿಮದ್ರಾ, ಹಣಮಂತ ವರ್ಕನಳ್ಳಿ, ಮುನಿಯಪ್ಪ ಗೌಡ ವರ್ಕನಳ್ಳಿ, ದೇವಪ್ಪ ನಾಯಕ ವರ್ಕನಳ್ಳಿ ಭಾಗವಹಿಸಿದ್ದರು.