ಸುರಪುರ: ನಾಡು, ನುಡಿ, ನೆಲ ಹಾಗೂ ಜಲದ ವಿಚಾರ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತದೆ. ಇನ್ನೂ ನೂರಾರು ವರ್ಷಗಳ ಕಾಲ ಕರವೇ ಇದೇ ರೀತಿ ನಾಡಿನ ಸೇವೆ ಮಾಡಲಿ ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.

ಪಟ್ಟಣದ ರಂಗಂಪೇಟೆಯ ದೊಡ್ಡ ಬಜಾರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ 22ನೇ ವರ್ಷದ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಎಂ.ಆರ್. ಬುದ್ಧಿವಂತ ಶೆಟ್ಟರ್ ಅವರು ಕನ್ನಡ ಸೇವೆ ಮಾಡುತ್ತಾ ರಂಗಂಪೇಟೆಯ ನೆಲದಲ್ಲಿ ಸಂಘವನ್ನು ಆರಂಭಿಸಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸಂತೋಷದ ಸಂಗತಿಯಾಗಿದೆ. ಅದೇ ರೀತಿಯಲ್ಲಿ ವೆಂಕಟೇಶ ನಾಯಕ ಬೈರಿಮರಡಿ ಅವರ ನೇತೃತ್ವದಲ್ಲಿ ಕರವೇ ಕನ್ನಡ ನಾಡಿನ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು.

ದೇವಾಪುರದ ಶ್ರೀ ಶಿವಮೂರ್ತಿ ಶಿವಾಚಾರ್ಯರು, ಮುದನೂರಿನ ಸಿದ್ದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಗೋಲಪಲ್ಲಿಯ ವರದಾನೇಶ್ವರ ಮಹಾಸ್ವಾಮಿಗಳು ಹಾಗೂ ದೇವರಗೋನಾಲದ ಸಕ್ರೆಪ್ಪ ತಾತನವರು ಸಾನ್ನಿಧ್ಯ ವಹಿಸಿದ್ದರು.

ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮು ನಾಯಕ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ರಾಜಾ ಮುಕುಂದ ನಾಯಕ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ್ ಜಮದ್ರಖಾನಿ, ಶಂಕರ ನಾಯಕ, ರಾಜಾ ರಂಗಪ್ಪ ನಾಯಕ, ವೆಂಕಟೇಶ ಬೇಟೆಗಾರ, ಭೀಮನಗೌಡ ಲಕ್ಷ್ಮೀ ಹೆಮನೂರ, ಬಲಭೀಮನಾಯಕ ಬೈರಿಮರಡಿ, ಶ್ರೀನಿವಾಸ್ ನಾಯಕ ದರಬಾರಿ, ದೇವರಾಜ್ ನಾಯಕ ಹೆಮನೂರ, ವೆಂಕಟೇಶ ಬೇಟೆಗಾರ, ರಮೇಶ ಶೆಟ್ಟಿ ಕಕ್ಕೇರಾ, ಭೀಮಣ್ಣ ಬೇವಿನಾಳ, ಶರಣು ನಾಯಕ ಬೈರಿಮರಡಿ, ಚಂದ್ರಶೇಖರ ಜಡೀಮರಳ್, ಹೊನ್ನಪ್ಪ ತಳವಾರ್, ಯಲ್ಲಪ್ಪ ನಾಯಕ, ಕರವೇ ಪ್ರ.ಶೆಟ್ಟಿ ಬಣದ ಅಧ್ಯಕ್ಷ ನಿಂಗಪ್ಪ ನಾಯಕ, ಜಕಜ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ರವಿ ನಾಯಕ, ಜಯಕರ್ನಾಟಕ ತಾಲೂಕು ಅಧ್ಯಕ್ಷ ಯಲ್ಲಪ್ಪ ನಾಯಕ, ಕನ್ನಡ ಸೇನೆ ಕಾರ್ಯಾಧ್ಯಕ್ಷ ಭಾಗನಾಥ ಗುತ್ತೇದಾರ ಹಾಗೂ ನಕ ಸೇನೆ ಅಧ್ಯಕ್ಷ ವೆಂಕಟೇಶ ಪ್ಯಾಪ್ಲಿ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.

ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಂದ್ರ ನಾಯಕ ಸ್ವಾಗತಿಸಿದರು. ಲಂಕೇಶ ದೇವತ್ಕಲ್, ಮಲ್ಲಿಕಾರ್ಜುನ ಹಿರೇಮಠ ಹಾಗೂ ಶ್ವೇತಾ ಕುಲಕರ್ಣಿ ನಿರೂಪಿಸಿದರು. ಶ್ರೀಶೈಲ ಕಾಚಾಪುರ ವಂದಿಸಿದರು. ಕರವೇಯ ನೂರಾರು ಕಾರ್ಯಕರ್ತರು ಹಾಗೂ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾಧಕರಿಗೆ ಕುವೆಂಪು ಪ್ರಶಸ್ತಿ ಪ್ರದಾನ :

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ಸುರೇಶ ಸಜ್ಜನ (ಸಮಾಜ ಸೇವೆ), ಡಾ. ಮುಕುಂದ ಯನಗುಂಟಿ ಕನ್ನೆಳ್ಳಿ (ವೈದ್ಯಕೀಯ), ಸಣ್ಣನಿಂಗಣ್ಣ ಚಿಕ್ಕನಳ್ಳಿ ದೇವರಗೋನಾಲ (ಜಾನಪದ), ಲಂಕೆಪ್ಪ ಕವಲಿ (ಶಿಕ್ಷಣ), ಹೊನ್ನಪ್ಪ ತೇಲ್ಕರ್ (ಮಾಧ್ಯಮ), ಮಹಾಂತೇಶ ಗೋನಾಲ (ಸಾಹಿತ್ಯ), ಹಳ್ಳೆರಾವ ಕುಲಕರ್ಣಿ ಕೆಂಭಾವಿ (ಚಿತ್ರಕಲೆ), ಜಯಶ್ರೀ ಪ್ರಕಾಶ ಪಾಟೀಲ್ ಗುಳಬಾಳ (ನಾಗರಿಕ ಸೇವೆ), ದೇವಿಂದ್ರಪ್ಪ ಭೋಯಿ (ಕೃಷಿ), ಶಿವು ಮಂಗೀಹಾಳ (ಸಂಗೀತ) ಹಾಗೂ ಮಾರ್ತಂಡಪ್ಪ ಬೋಸಗಿ (ಕ್ರೀಡೆ) ಅವರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೀರ್ತಿ ನಿಂಗಣ್ಣ ಹೊಸಮನಿ (ಇಂಡಿಯಾ ಬುಕ್ ಆಫ್ ಅವಾರ್ಡ್ಸ್) ಹಾಗೂ ದೇವಿಂದ್ರ ನಾಯಕ ತಿಮ್ಮಾಪುರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ :

ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್‌ನ ಮೈಲಾರಿ ಹಾಗೂ ಲಕ್ಷ್ಮೀ ವಿಜಯಪುರ ಅವರಿಂದ ಜಾನಪದ ಗಾಯನ ವೈಭವ ನಡೆಯಿತು. ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ದಾನಪ್ಪ, ದೀಕ್ಷಾ ಕುಂದಾಪುರ, ಉಲ್ಲಾಸ್ ಯು.ಕೆ. ಹುಲಿ, ಕೊಪ್ಪಳ ಮಂಜು ಹಾಗೂ ವಿನಾಯಕ ಬದಾಮಿ ಜ್ಯೂ. ಕಪ್ಪೆರಾಯ ಅವರ ಹಾಸ್ಯ ಕಾರ್ಯಕ್ರಮ ಪ್ರೇಕ್ಷಕರಲ್ಲಿ ನಗೆ ಮೂಡಿಸಿತು. ಸೂರ್ಯ ಕಲಾ ಟ್ರಸ್ಟ್ ಬಳ್ಳಾರಿ ತಂಡದವರಿಂದ ವಿಶೇಷ ನೃತ್ಯ ಪ್ರದರ್ಶನಗಳು ಹಾಗೂ ಸಗರನಾಡಿನ ಸ್ಥಳೀಯ ಸಂಗೀತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮಗಳು ಕನ್ನಡಾಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor