×
Ad

ಸುರಪುರ | ವಾಲ್ಮೀಕಿ ಶಾಖಾ ಮಠ‌ ನಿರ್ಮಾಣ ಸ್ಥಳಕ್ಕೆ ಪ್ರಸನ್ನಾನಂದಪುರಿ ಶ್ರೀ ಭೇಟಿ

Update: 2026-05-16 19:09 IST

ಸುರಪುರ : ತಾಲೂಕಿನ ಬಂಡೊಳ್ಳಿ‌ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ವಾಲ್ಮೀಕಿ ಶಾಖಾ ಮಠದ ಸ್ಥಳಕ್ಕೆ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಶ್ರೀಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಭೆ ನಡೆಸಿ ಮಾತನಾಡಿದ ಶ್ರೀಗಳು, ವಾಲ್ಮೀಕಿ ಗುರು ಪೀಠದ ಶಾಖಾ ಮಠ‌ ಹಾಗೂ ವಿದ್ಯಾ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಶಾಖಾ ಮಠದಿಂದ ಸಮಾಜ ಮುಖಿ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು. ಅಲ್ಲದೆ ಶೀಘ್ರದಲ್ಲಿ ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ಗೋಲಪಲ್ಲಿಯ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ, ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮನಗೌಡ ಲಕ್ಷ್ಮೀ ಹೆಮನೂರ, ದೇವದುರ್ಗ ತಾಲೂಕಿನ ಸಮಾಜದ ಮುಖಂಡರಾದ ವೆಂಕಟನಗೌಡ, ಸುರಪುರ ತಾಲೂಕಿನ ಸಮಾಜದ ಮುಖಂಡರಾದ ರಮೇಶ್ ದೊರೆ ಆಲ್ದಾಳ, ವೆಂಕಟೇಶ್ ಬೇಟೆಗಾರ, ಭೀಮು ನಾಯಕ್ ಮಲ್ಲಿ ಬಾವಿ, ನಾಗರಾಜ್ ಪ್ಯಾಪ್ಲಿ, ಅಯ್ಯಣ್ಣ ಹಾಲಬಾವಿ, ದೇವೇಂದ್ರಪ್ಪ ಬಳಿಚಕ್ರ, ಶರಣಗೌಡ ಬಂಡೊಳ್ಳಿ, ವೆಂಕಣ್ಣ ಸಾಹುಕಾರ,ಗುರು ನಾಯಕ್, ಸಂಜು ನಾಯಕ್, ಶರಣು ನಾಯಕ್, ಪಿಎಸ್ಐ ಸಿದ್ದಣ್ಣ ಯಡ್ರಾಮಿ, ವೆಂಕಣ್ಣ ದೊರಿ, ಗೌಡಗೇರ ಸೇರಿದಂತೆ ಸುತ್ತಮುತ್ತ ಗ್ರಾಮದ ಹಿರಿಯ ಮುಖಂಡರು, ಯುವಕರು, ಮಠದ ಭಕ್ತರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News