ಯಾದಗಿರಿ: ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಜನರು ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವುದಿರಂದ ಜನರು ನೀರನ್ನು ಮಿತವಾಗಿ ಬಳಸಬೇಕು, ಅದರ ಜೊತೆಗೆ ಅಧಿಕಾರಿಗಳು ನೀರಿನ ಸಮಸ್ಯೆಯ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಗುರುಮಠಕಲ್ ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಸೇರಿದಂತೆ 3 ಕೋಟಿಗೂ ಅಧಿಕ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಹಳ್ಳಿಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಅತಿಯಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ಲಭ್ಯವಿರುವ ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು ಮತ್ತು ಯಾವುದೇ ಕಾರಣಕ್ಕೂ ನೀರನ್ನು ಪೋಲು ಮಾಡಬಾರದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಅಮರೇಶ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಇಇ ಸಂಜಯಕುಮಾರ ಡಿ.ಎಂ, ಎಇಇ ಅಶೋಕ ಕುಮಾರ ರಾಠೋಡ, ಎಇ ರಾಜಕುಮಾರ, ಎಇಇ ಕೈಲಾಸ ಅನವಾರ, ಇಸಿಒ ಶಿವರಾಜ ಸಾಕಾ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣ, ಭೂ ಸೇನಾ ನಿಗಮದ ಅಧಿಕಾರಿ ಬನ್ನಪ್ಪ ಕೋಮಾರ, ಪಾಪಣ್ಣ ಮನ್ನೆ, ಪ್ರಕಾಶ ನಿರೇಟಿ, ಶರಣು ಆವಂಟಿ, ಮಲ್ಲಿಕಾರ್ಜುನ ಅರುಣಿ, ಕೃಷ್ಣಾರಡ್ಡುಇ ಪೊಲೀಸ್ ಪಾಟೀಲ, ರವಿಪಾಟೀಲ, ಬಸಣ್ಣ ದೇವರಳ್ಳಿ, ಶರಣಪ್ಪ ಹೂಗಾರ, ಆಶಣ್ಣ ಬುದ್ದಾ ಬಾಲು ದಾಸರಿ, ಭೀಮಶಪ್ಪ ಕುಣಸಿ, ಅಯೂಬ್ ಪುಟ್‌ಪಾಕ್, ರಾಮದಾಸ ಪುಟಪಾಕ್ ತಾಂಡಾ, ಮಲ್ಲಿಕಾರ್ಜುನ ನಜರಾಪೂರ, ಶಿವಾಜಿ ದಂತಾಪೂರ ಸೇರಿದಂತೆ ಇತರರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor