ಯಾದಗಿರಿ| ವಾರ್ತಾಭಾರತಿ ವರದಿಗಾರ್ತಿ ಪ್ರೀತಿ ರಾಠಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಹುಣಸಗಿ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹುಣಸಗಿ ತಾಲೂಕು ಆಡಳಿತದ ವತಿಯಿಂದ ನೀಡಲಾಗುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಾರ್ತಾಭಾರತಿ ಕನ್ನಡ ದಿನಪತ್ರಿಕೆಯ ಹುಣಸಗಿ ತಾಲೂಕು ವರದಿಗಾರ್ತಿ ಪ್ರೀತಿ ರಾಠಿ ಅವರು ಭಾಜನರಾಗಿದ್ದಾರೆ.
ಪತ್ರಿಕೋದ್ಯಮದ ಮೂಲಕ ಸ್ಥಳೀಯ ಸಮಸ್ಯೆಗಳು, ಜನಸಾಮಾನ್ಯರ ಧ್ವನಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ವರದಿಗಳ ಮೂಲಕ ಬೆಳಕಿಗೆ ತರುತ್ತಿರುವ ಅವರ ಕಾರ್ಯವನ್ನು ಪರಿಗಣಿಸಿ ತಾಲೂಕು ಆಡಳಿತ ಈ ಗೌರವಕ್ಕೆ ಆಯ್ಕೆ ಮಾಡಿದೆ.
ಅವರ ಆಯ್ಕೆಗೆ ಪತ್ರಕರ್ತರು, ಮಾಧ್ಯಮ ಮಿತ್ರರು ಹಾಗೂ ಹಿತೈಷಿಗಳು ಅಭಿನಂದಿಸಿದ್ದಾರೆ.