ಯಾದಗಿರಿ | ಮೊಹರಂ ಆಚರಣೆ ಹಿನ್ನೆಲೆ ಶಾಂತಿ ಸಭೆ
ಸುರಪುರ: ತಾಲೂಕಿನ ದೇವಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮೊಹರಂ ಹಬ್ಬದ ಅಂಗವಾಗಿ ಶಾಂತಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಿಎಸ್ಐ ಶರಣಪ್ಪ ಹವಾಲ್ದಾರ್ ಮಾತನಾಡಿ , ಮೊಹರಂ ಹಬ್ಬವು ಹಿಂದೂ ಮುಸ್ಲಿಮರ ಭಾವೈಕ್ಯತೆ ಹಬ್ಬವಾಗಿದ್ದು ಜಾತಿ ಮತಗಳ ಭೇದವಿಲ್ಲದೆ ಎಲ್ಲಾ ಧರ್ಮದ ಜನರು ಒಟ್ಟಾಗಿ ಆಚರಿಸುವ ಹಬ್ಬ. ಈ ಹಬ್ಬವನ್ನು ಸೌಹಾರ್ದತೆ ಮತ್ತು ಶಾಂತಿಯುತವಾಗಿ ಆಚರಿಸಬೇಕು ಎಂದು ಹೇಳಿದರು.
ಹಬ್ಬದ ಸಂಭ್ರಮದಲ್ಲಿ ಯುವಕರನ್ನು ಸಮಾಜದ ಮುಖಂಡರು ನಿಯಂತ್ರಣದಲ್ಲಿ ಇಟ್ಟುಕೊಂಡು ಯಾವುದೇ ಘರ್ಷಣೆಗೆ ಅವಕಾಶ ನೀಡುವ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ನೋಡಿಕೊಳ್ಳಬೇಕು. ಕಾನೂನು ಮೀರಿ ಯಾರಾದರೂ ವರ್ತಿಸಿದರೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರವಿ ಮುತ್ಯಾ ಕಲಕೇರಿ, ರಜೀಬ್ ಸಾಬ್ ಮಕಂದಾರ್, ಯೂಸುಫ್ ಕಂಡಕ್ಟರ್, ವೆಂಕಟೇಶ್ ಗ್ಯಾಂಗಿನ್ ಮಾತನಾಡಿದರು.
ಸಭೆಯಲ್ಲಿ ಎಎಸ್ಐ ಮಾನಪ್ಪ ಶಾರದಹಳ್ಳಿ , ರವಿ ಮುತ್ಯಾ ಕಲಕೇರಿ, ರಜೀಬ್ ಸಾಬ್, ಯೂಸುಫ್ ಸಾಬ್, ದವಲ್ ಸಾಬ್, ವೆಂಕಟೇಶ್ ಗ್ಯಾಂಗಿನ್ ,ಭೀಮರಾಯ್ ಡಂಬರ್, ಪರಮಣ್ಣ ದೊಡ್ಡಮನಿ, ರತ್ನಪ್ಪ ಬಾಂಬೆ, ರವಿ ಡಂಬರ್, ಮಲ್ಲಪ್ಪ ಎತ್ತಿನಮನಿ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.