Yadgiri | 3 ಕೋಟಿ ರೂ. ವೆಚ್ಚದ ಶಾದಿ ಮಹಲ್, ಉರ್ದು ಶಾಲೆ ಕಾಮಗಾರಿ ಪರಿಶೀಲಿಸಿದ ಶಾಸಕ ದರ್ಶನಾಪುರ
ಯಾದಗಿರಿ: ಶಹಾಪುರ ಪಟ್ಟಣದ ವಿಭೂತಿಹಳ್ಳಿ ರಸ್ತೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮುಸ್ಲಿಂ ಶಾದಿ ಮಹಲ್ ಹಾಗೂ ಅಂಜುಮನ್ ಹಯಾತ್ ಉರ್ದು ಪ್ರಾಥಮಿಕ ಶಾಲೆಯ ಕಾಮಗಾರಿಯನ್ನು ಮಾಜಿ ಸಚಿವ ಹಾಗೂ ಶಾಸಕ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು.
ಕಾಮಗಾರಿಯ ಪ್ರಗತಿ ಹಾಗೂ ಗುಣಮಟ್ಟದ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಶಾದಿ ಮಹಲ್ ಹಾಗೂ ಉರ್ದು ಶಾಲೆ ನಿರ್ಮಾಣದಿಂದ ಸ್ಥಳೀಯರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ಚಾಂದ್, ಮಾಜಿ ಟೌನ್ ಪ್ಲ್ಯಾನಿಂಗ್ ಚೇರ್ಮನ್ ಮುಸ್ತಫಾ ದರ್ಬಾನ್, ಜಿಡಿಸಿಸಿ ಬ್ಯಾಂಕ್ ಗುಲ್ಬರ್ಗಾ ನಿರ್ದೇಶಕ ಇಬ್ರಾಹಿಂ ಶಿರವಾಳ, ಸಯ್ಯದ್ ಖಾದ್ರಿ, ಕಲೀಮ್ ಇನಾಮ್ದಾರ್, ನಯೀಮ್ ಅಫ್ಘಾನ್, ಪಾಶಾ ಪಟೇಲ್, ಚಾಂದ್ ಪಟೇಲ್, ಸದ್ದಾಂ ದಾದುಲ್ಲಾ, ಸಲೀಂ ಸಂಗ್ರಾಮ್, ಇಸ್ಮಾಯಿಲ್ ದಾದುಲ್ಲಾ, ಆರಿಫ್ ಕಲೇಮಠ್, ಕರೀಂ ದರ್ಬಾನ್, ಸಯ್ಯಿದ್ ಮಹ್ಮೂದ್ ಹುಸೇನಿ ಕೋಹಾಸವಾರ್, ಖಯ್ಯುಂ ಬೇಡಿ, ಲಾಲ್ ಅಹ್ಮದ್ ಖುರೇಷಿ ಹಾಗೂ ರಫೀಕ್ ಚೌಧರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.