ದ.ಕ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ: ಬೆಳ್ತಂಗಡಿ ಮತ್ತು ಪುತ್ತೂರಿಗೆ ಪ್ರಶಸ್ತಿ
ವಿಟ್ಲ: ವಿಟ್ಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಉಪ ನಿರ್ದೇಶಕರ ಕಛೇರಿ ದ ಕ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಮತ್ತು ವಿಟ್ಠಲ ಎಜುಕೇಶನ್ ಸೊಸೈಟಿ ವಿಟ್ಲ ಇದರ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ರ ಮತ್ತು 17 ರ ವಯೋಮಾನದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ 17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಬೆಳ್ತಂಗಡಿ ತಾಲೂಕು ಸ್ಥಾನ ಪಡೆದುಕೊಂಡಿದೆ.
14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಬೆಳ್ತಂಗಡಿ ತಾಲೂಕು ದ್ವಿತೀಯ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದರು. ಬಾಲಕರ ವಿಭಾಗದಲ್ಲಿ ಪುತ್ತೂರು ತಾಲೂಕು ಪ್ರಥಮ. ಬೆಳ್ತಂಗಡಿ ತಾಲೂಕಿನ ಬಾಲಕರು ದ್ವಿತೀಯ ಪ್ರಶಸ್ತಿ ಪಡೆದರು.
17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಬೆಳ್ತಂಗಡಿ ತಾಲೂಕು ಪ್ರಥಮ ದ್ವಿತೀಯ ಪುತ್ತೂರು ತಾಲೂಕಿನ ಬಾಲಕಿಯರು ಪ್ರಶಸ್ತಿ ಪಡೆದರು. ಬಾಲಕರ ವಿಭಾಗದಲ್ಲಿ ಬಂಟ್ವಾಳ ತಾಲೂಕು ಪ್ರಥಮ ಮತ್ತು ಪುತ್ತೂರು ತಾಲೂಕಿನ ಬಾಲಕರು ದ್ವಿತೀಯ ಪ್ರಶಸ್ತಿ ಪಡೆದರು.
ಬೆಸ್ಟ್ ಅಟ್ಯಾಕರುಗಳಾಗಿ ಆಸ್ಟ್ರಾ ಜೀನ್ ಡಿ ಸಸೋಜಾ, ಶಿಶಿರ್ ಪುತ್ತೂರು, ಸ್ರುತಾ ಡಿ ಬಿ ಮತ್ತು ಹನಿಸ್ ಪುತ್ತೂರು, ಬೆಸ್ಟ್ ಸೆಟ್ಟರ್ ಗಳಾಗಿ ಅತಿಶ್ರೀ, ಮಹಮ್ಮದ್ ಹೂದ್, ಸಿಂಚನ ಬೆಳ್ತಂಗಡಿ ಮತ್ತು ಪ್ರನಿಶ್ ಬೆಸ್ಟ್ ಆಲ್ ರೌಂಡರ್ ಗಳಾಗಿ ರಕ್ಷಿತಾ, ಜೆಸವಿನ್, ಯಕ್ಷಿತಾ ಮತ್ತು ತನ್ಮಯಿ ಇವರು ಪ್ರಶಸ್ತಿ ಪಡೆದರು.
ಈ ಕಾರ್ಯಕ್ರಮದಲ್ಲಿ ವಿಟ್ಠಲ ಎಜುಕೇಶನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೊಪ್ಪಳ, ಕಾರ್ಯದರ್ಶಿ ಶಂಕರ ನಾರಾಯಣ ಪ್ರಸಾದ್, ಸದಸ್ಯರಾದ ರವಿಪ್ರಕಾಶ್ ಮತ್ತು ನಿತ್ಯಾನಂದ ನಾಯಕ್, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ ಮಾಜಿ ಉಪ ಪ್ರಾಂಶುಪಾಲ ಹೆಚ್ ಸುಬ್ರಹ್ಮಣ್ಯ ಭಟ್, ಆಶಾ ನಾಯಕ್, ಸುರೇಶ್ ಶೆಟ್ಟಿ, ಆಶಾ ನಾಯಕ್, ರಮಾನಾಥ ವಿಟ್ಲ, ತುಳಸೀ ದಾಸ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.