×
Ad

ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚನೆ: ಪ್ರಕರಣ ದಾಖಲು

Update: 2025-10-10 21:14 IST

ಮಂಗಳೂರು, ಅ.10: ಸಹಕಾರ ಸಂಘದಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 6.24 ಲಕ್ಷ ರೂ. ಸಾಲ ಪಡೆದು ಬಳಿಕ ವಂಚಿಸಿರುವ ಬಗ್ಗೆ ನಗರದ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾವೂರು ಆಕಾಶಭವನ ಕೆಳಗಿನ ಆನಂದ ನಗರ ವಿಳಾಸದ ಆರೀಫ್ ಅಬೂಬಕ್ಕರ್ ಎಂಬಾತ ಅ.6ರಂದು ಶಾಖೆಗೆ ತೆರಳಿ ಕಾವೂರಿನ ವಿಳಾಸ ನೀಡಿ 79.400 ಗ್ರಾಂ ತೂಕವಿದ್ದ ಒಂದು ಚೈನ್ ಮತ್ತು 4 ಬ್ರಾಸ್‌ಲೆಟ್ ಅಡವಿಟ್ಟು ಚಿನ್ನಾಭರಣ ಸಾಲ ಕೇಳಿದ್ದ. ಸಂಘದ ಅಧಿಕೃತ ಚಿನ್ನಾಭರಣ ಪರೀಕ್ಷಕರು ಚಿನ್ನವನ್ನು ಪರಿಶೀಲಿಸಿ ಅಸಲಿ ಎಂದು ದೃಢೀಕರಿಸಿ 8.19 ಲಕ್ಷ ರೂ. ಮೌಲ್ಯ ಆಗುತ್ತದೆ ಎಂದು ತಿಳಿಸಿದ್ದರು. ಪರೀಕ್ಷಕರು ನೀಡಿದ ದೃಢೀಕರಣದ ಆಧಾರದ ಮೇಲೆ 6.24 ಲಕ್ಷ ರೂ. ಸಾಲವನ್ನು ಆರೀಫ್‌ಗೆ ನೀಡಲಾಗಿತ್ತು.

ಬಳಿಕ ಮಂಗಳೂರು ಟೆಸ್ಟಿಂಗ್ ಸೆಂಟರ್‌ನಲ್ಲಿ ತಪಾಸಣೆಗೆ ಒಳಪಡಿಸಿದಾಗ ಚಿನ್ನಾಭರಣ ನಕಲಿ ಎಂದು ಗೊತ್ತಾಗಿದೆ. ಆತನ ಖಾತೆಗೆ ಜಮೆ ಮಾಡಿದ ಮೊತ್ತವನ್ನು ತಡೆ ಹಿಡಿಯುವ ಪ್ರಯತ್ನ ನಡೆಸಿದಾಗ ಆ ಹಣವು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News