ಬೆಳ್ತಂಗಡಿ: ಬಸ್ ನಿಲ್ದಾಣದಲ್ಲಿ ಮಹಿಳಾ ಕಂಡಕ್ಟರ್ - ಪ್ರಯಾಣಿಕನ ನಡುವೆ ಜಟಾಪಟಿ
ಬೆಳ್ತಂಗಡಿ: ಟಿಕೆಟ್ ಹಣದ ವಿಚಾರದಲ್ಲಿ ಮಹಿಳಾ ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಜಟಾಪಟಿಯಾದ ಘಟನೆ ಶುಕ್ರವಾರ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಟಿಕೆಟ್ ದುಡ್ಡು ಕೊಟ್ಟಿದ್ದೇನೆ ಎಂದು ಪ್ರಯಾಣಿಕ, ಕೊಟ್ಟಿಲ್ಲ ಎಂದು ಮಹಿಳಾ ಕಂಡಕ್ಟರ್ ವಾದ ತಾರಕಕ್ಕೇರಿ, ಪ್ರಯಾಣಿಕನ ಮೇಲೆ ಬಸ್ ನಲ್ಲೇ ಕಂಡಕ್ಟರ್ ಹಲ್ಲೆಗೆ ಮುಂದಾಗಿರುವುದಾಗಿ ಹೇಳಲಾಗಿದೆ.
ಮೂಡಿಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಗೆ ಉಜಿರೆಯಲ್ಲಿ ಹತ್ತಿದ ಪ್ರಯಾಣಿಕ ಟಿಕೆಟ್ ಹಣ ಕೊಟ್ಟಿದ್ದೇನೆ ಅಂತ ವಾದಿಸುತ್ತಿದ್ದರೆ, ಲೇಡಿ ಕಂಡಕ್ಟರ್ ಹಣ ಕೊಟ್ಟಿಲ್ಲ ಅಂತ ವಾದಿಸುತ್ತಿದ್ದರು. ಬಸ್ ನಲ್ಲಿದ್ದ ಪ್ರಯಾಣಿಕರು ಆತ ಹಣ ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ.
ಬೆಳ್ತಂಗಡಿ ಬಸ್ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಗಲಾಟೆ ಮತ್ತಷ್ಟು ಜೋರಾಯಿತು. ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಗಲಾಟೆ ತಡೆಯುಲು ಮುಂದಾದಾಗ ಲೇಡಿ ಕಂಡಕ್ಟರ್ ಅವರ ಮೇಲು ಹೌಹಾರಿದರು. ಈ ವೇಳೆ ಬೆಳ್ತಂಗಡಿ ಪೊಲೀಸರು ಮಧ್ಯ ಪ್ರವೇಶಿಸಿ, ಕಂಡಕ್ಟರ್ ಮತ್ತು ಪ್ರಯಾಣಿಕನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಬೆಳ್ತಂಗಡಿ ಟಿಸಿ ಬದಲಿ ವ್ಯವಸ್ಥೆ ಮಾಡಿದರು ಎಂದು ತಿಳಿದುಬಂದಿದೆ.