×
Ad

ಕೃಷ್ಣಾಪುರ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ; 16 ಜಾನುವಾರುಗಳು ವಶಕ್ಕೆ

Update: 2024-07-08 12:51 IST

ಸುರತ್ಕಲ್, ಜು.8: ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗೆ ಪೊಲೀಸರು ದಾಳಿ ಮಾಡಿ ದನಗಳು ಮತ್ತು ಮಾಂಸ ವಶಕ್ಕೆ ಪಡೆದುಕೊಂಡಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 8ನೇ ಬ್ಲಾಕ್ ಬಳಿ ನಡೆದಿರುವುದು ವರದಿಯಾಗಿದೆ.

ನೂತನ ನಿರ್ಮಾಣದ ಮನೆಯ ಪಕ್ಕದಲ್ಲಿ ಟರ್ಪಾಲುಗಳಿಂದ ನಿರ್ಮಿಸಿದ್ದ ಶೆಡ್ ವೊಂದರಲ್ಲಿ ಈ ಅಕ್ರಮ ಕಸಾಯಿ ಖಾನೆ ಕಾರ್ಯಾಚರಿಸುತ್ತಿತ್ತು ಎಂದು ತಿಳಿದು ಬಂದಿದೆ.

ದಾಳಿಯ ವೇಳೆ ಅಕ್ರಮ ಕಸಾಯಿಖಾನೆ ಬಳಿಯ ನೂತನ ಮನೆಯೊಂದರಲ್ಲಿ ಕಟ್ಟಿ ಹಾಕಲಾಗಿದ್ದ ಸುಮಾರು 16 ದನಗಳನ್ನು ಹಾಗೂ ಶೆಡ್ ನಲ್ಲಿ ಚರ್ಮ ಸುಲಿದ ಸ್ಥಿತಿಯಲ್ಲಿದ್ದ ದನವೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News