×
Ad

ಮಂಗಳೂರು - ಮೂಡುಜೆಪ್ಪು ನೂತನ ಸರಕಾರಿ ಬಸ್‌ಗೆ ಶಾಸಕ ಭರತ್ ಶೆಟ್ಟಿ ಚಾಲನೆ

Update: 2026-03-06 21:11 IST

ಮಂಗಳೂರು : ಮಂಗಳೂರು- ಮೂಡುಜೆಪ್ಪು ಸರಕಾರಿ ನಗರ ಸಾರಿಗೆ ಬಸ್ಸಿಗೆ ಶಾಸಕ ಭರತ್ ಶೆಟ್ಟಿ ಮಂಗಳೂರು ಬಸ್‌ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ, ಗ್ಯಾರೆಂಟಿ ಸಮಿತಿಯ ಸದಸ್ಯರು, ಕೆಎಸ್‌ಆರ್‌ಟಿಸಿಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಡಿಟಿಓ - ಕಮಲ್‌ ಕುಮಾರ್, ಡಿಎಂಇ-ವಿನಯ್ ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ಬಸ್ಸು ಮಂಗಳೂರು ಬಸ್ಸು ನಿಲ್ದಾಣದಿಂದ 07.05, 09.00, 11.15, 13.30, 15.10, 17.00 ಗಂಟೆಗೆ ಮಲ್ಲಿಕಟ್ಟೆ, ನಂತೂರು, ಕುಡುಪು, ವಾಮಂಜೂರು, ಉಳಾಯಿಬೆಟ್ಟು ಮಾರ್ಗವಾಗಿ ಮೂಡುಜೆಪ್ಪುವಿಗೆ ಹಾಗೂ ಮರು ಪ್ರಯಾಣದಲ್ಲಿ ಮೂಡುಜೆಪ್ಪುವಿನಿಂದ ಮಂಗಳೂರಿಗೆ 08.00, 10.00, 12.15, 14.20, 16.00, 18.00 ಗಂಟೆಗೆ ಕಾರ್ಯಾಚರಣೆಯಾಗಲಿದೆ.

ಈ ಸಂದರ್ಭ ಶಾಸಕರು, ಜನತೆಯ ಬಹು ಬೇಡಿಕೆಯ ಸುರತ್ಕಲ್ - ಪರಂಗಿಪೇಟೆ ಮತ್ತು ಆಕಾಶಭವನ - ಪಡೀಲ್ ನೂತನ ಬಸ್ ಸಂಚಾರವನ್ನು ಕೂಡಲೇ ಆರಂಭಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News