ಹರೇಕಳ ನ್ಯೂಪಡ್ಪು ತ್ವಾಹ ಜುಮಾ ಮಸ್ಜಿದ್‌ನಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ
ಕೊಣಾಜೆ : ಹರೇಕಳದ ನ್ಯೂಪಡ್ಪು ತ್ವಾಹ ಜುಮಾ ಮಸ್ಜಿದ್ ಆಡಳಿತ ಸಮಿತಿ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮದ್ರಸ ಮುಖ್ಯೋಪಾಧ್ಯಾಯರಾದ ಅಶ್ರಫ್ ಝೈನಿ ಉಸ್ತಾದರು ಚಾಲನೆ ನೀಡಿದರು. ಬಳಿಕ ಆಡಳಿತ ಸಮಿತಿ ಅಧ್ಯಕ್ಷ ಮುಹಮ್ಮದ್ ಆಸೀಫ್ ಮತ್ತು ಖತೀಬ್ ಉಸ್ತಾದರಾದ ಮುಹಮ್ಮದ್ ಮುಸ್ತಾಕ್ ಕಾಮಿಲ್ ಸಖಾಫಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಸ್ತಾದ್ ಅಲ್ತಾಫ್ ಮದನಿ ಅವರು ಗಣರಾಜ್ಯೋತ್ಸವದ ಮಹತ್ವ ವಿವರಿಸಿ, ಸಂವಿಧಾನದ ಮೌಲ್ಯಗಳ ರಕ್ಷಣೆಗೆ ಬದ್ಧರಾಗುವಂತೆ ಸಂವಿಧಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಸ್ತಾದ್ ಇಸ್ಮಾಯಿಲ್ ಲತಿಫಿ, ಆಡಳಿತ ಸಮಿತಿಯ ಮಾಜಿ ಉಪಾಧ್ಯಕ್ಷ ಹಿರಿಯರಾದ ಟಿ.ಎಂ. ಮುಹಮ್ಮದ್ ಮೋನು, ಕೋಶಾಧಿಕಾರಿ ಅಬ್ದುಲ್ ರಶೀದ್ ಎಚ್., ಕಾರ್ಯದರ್ಶಿಗಳಾದ ಶಾಕೀರ್, ಮುಬಾರಕ್, ಮದ್ರಸ ಸಲಹಾ ಸಮಿತಿ ಮೇಲುಸ್ತುವಾರಿ ಅಬ್ದುಲ್ ಲತೀಫ್, ಆರೀಸ್, ಆಡಳಿತ ಸಮಿತಿ ಸದಸ್ಯರಾದ ಜಮಾಲ್ ಅಹ್ಮದ್, ಇಕ್ಬಾಲ್, ಇಲ್ಯಾಸ್, ಇಮ್ತಿಯಾಜ್, ಗಲ್ಫ್ ಸಮಿತಿ ಸದಸ್ಯರಾದ ಖಾದರ್ ಮೋನು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಆಡಳಿತ ಸಮಿತಿಯ ಪ್ರ. ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ನೆರವೇರಿಸಿದರು.