×
Ad

ಬಜ್ಪೆ | ನೂರುಲ್ ಉಲೂಂ ಮದ್ರಸ ಸುರಲ್ಪಾಡಿಯಲ್ಲಿ ಗಣರಾಜ್ಯೋತ್ಸವ ಆಚರಣೆ

Update: 2026-01-26 18:10 IST

ಬಜ್ಪೆ: ನೂರುಲ್ ಉಲೂಂ ಮದ್ರಸ ಸುರಲ್ಪಾಡಿಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಮಸೀದಿಯ ಖತೀಬ್ ಹೈದರ್ ದಾರಿಮಿ ಅವರು ಉದ್ಘಾಟಿಸಿ ದುಆ ನೆರವೇರಿಸಿದರು. ಆಡಳಿತ ಕಮಿಟಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಧ್ವಜಾರೋಹಣ ನೆರವೇರಿಸಿದರು.

ಪ್ರಧಾನ ಕಾರ್ಯದರ್ಶಿ ಶೇಖ್ ಮುಖ್ತಾರ್ ಮಾತನಾಡಿದರು. ಜೊತೆ ಕಾರ್ಯದರ್ಶಿ ರಫೀಕ್ ದರ್ಬಾರ್, ಬಿ.ಎಸ್.ಶರೀಫ್, ಹಸನ್, ಇಕ್ಬಾಲ್, ಬಶೀರ್ ಪ್ಲವರ್, ಸಲೀಂ ಹಾಗೂ ಮದ್ರಸ ಅಧ್ಯಾಪಕರು, ಜಮಾಅತ್ ಭಾಂದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ವೇಳೆ ನೂರುಲ್ ಉಲೂಂ ಮದ್ರಸ ವಿದ್ಯಾರ್ಥಿಗಳಿಂದ ಸ್ಕೌಟ್ ಪ್ರರ್ದಶನ ನಡೆಯಿತು. ಮದ್ರಸ ಸದರ್ ಮುಅಲ್ಲಿಂ ಬಿ.ಎಚ್ .ಮುಹಮ್ಮದ್ ಮುಸ್ತಫಾ ಹನೀಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News