ಜ.27ರಿಂದ ನಾಗರಕೋಯಿಲ್ - ಮಂಗಳೂರು ನಡುವೆ ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸಂಚಾರ
ಮಂಗಳೂರು, ಜ.26: ತಮಿಳುನಾಡಿನ ನಾಗರಕೋಯಿಲ್ ಜಂಕ್ಷನ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಹೊಸ ‘ಅಮೃತ್ ಭಾರತ್’ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಜ.27ರಿಂದ ಆರಂಭವಾಗಲಿದೆ.
ವಿವರ ಇಂತಿವೆ
ರೈಲುಗಳ ವಿವರ: ರೈಲು ಸಂಖ್ಯೆ 16329 (ನಾಗರಕೋಯಿಲ್ - ಮಂಗಳೂರು ಜಂಕ್ಷನ್ ): ಜ.27ರಿಂದ ಪ್ರತಿ ಮಂಗಳವಾರ ಬೆಳಗ್ಗೆ 11:40ಕ್ಕೆ ನಾಗರಕೋಯಿಲ್ನಿಂದ ರೈಲು ಹೊರಟು, ಮರುದಿನ ಬೆಳಗ್ಗೆ 5ಕ್ಕೆ ಮಂಗಳೂರು ತಲುಪಲಿದೆ.
ರೈಲು ಸಂಖ್ಯೆ 16330 (ಮಂಗಳೂರು - ನಾಗರಕೋಯಿಲ್): ಜ.28ರಿಂದ ಪ್ರತಿ ಬುಧವಾರ ಬೆಳಗ್ಗೆ 8ಕ್ಕೆ ಮಂಗಳೂರಿನಿಂದ ಹೊರಟು, ಅದೇ ದಿನ ರಾತ್ರಿ 8:05ಕ್ಕೆ ನಾಗರಕೋಯಿಲ್ ತಲುಪಲಿದೆ.
ಕೋಚ್ ಗಳ ವಿವರ: 8 ಸ್ಲೀಪರ್ ಕ್ಲಾಸ್, 11 ಜನರಲ್ ಸೆಕೆಂಡ್ ಕ್ಲಾಸ್, 1 ಪ್ಯಾಂಟ್ರಿ ಕಾರ್ ಮತ್ತು 2 ಲಗೇಜ್ ಬ್ರೇಕ್ ವ್ಯಾನ್ (ದಿವ್ಯಾಂಗ ಸ್ನೇಹಿ) ಕೋಚ್ಗಳನ್ನು ಈ ರೈಲು ಹೊಂದಿರುತ್ತದೆ.
ಶೊರ್ನೂರ್ ಜಂಕ್ಷನ್ , ತಿರೂರ್, ತಲಶ್ಶೇರಿ, ಕೋಝಿಕ್ಕೋಡ್, ಕಣ್ಣೂರು, ಕಾಸರಗೋಡು ನಿಲ್ದಾಣದ ಮೂಲಕ ಸಂಚರಿಸುವ ಈ ರೈಲಿಗೆ ಹೆಚ್ಚುವರಿಯಾಗಿ ತಿರುವನಂತಪುರಂ ಸೆಂಟ್ರಲ್, ವರ್ಕಲ, ಕೊಲ್ಲಂ ಜಂಕ್ಷನ್, ಕರುನಾಗಪಲ್ಲಿ, ಕಾಯಂಕುಲಂ ಜಂಕ್ಷನ್ , ಮಾವೇಲಿಕ್ಕರ, ಚೆಂಗನ್ನೂರು, ತಿರುವಲ್ಲಾ, ಚಂಗನಾಶ್ಶೇರಿ, ಕೊಟ್ಟಾಯಂ, ಎರ್ನಾಕುಲಂ ಟೌನ್, ಆಲುವಾ, ತ್ರಿಶೂರ್ ನಲ್ಲಿ ನಿಲುಗಡೆ ಇರುತ್ತದೆ ಎಂದು ಪ್ರಕಟನೆ ತಿಳಿಸಿದೆ.