×
Ad

ಅಬ್ದುಲ್ಲಾ ಮಾದುಮೂಲೆ, ಇಬ್ರಾಹೀಂ ಅಡ್ಕಸ್ಥಳ, ಡಾ. ಪ್ರಭಾಕರ ನೀರುಮಾರ್ಗ ಸಹಿತ 46 ಮಂದಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Update: 2023-10-31 21:02 IST

ಅಬ್ದುಲ್ಲಾ ಮಾದುಮೂಲೆ, ಇಬ್ರಾಹೀಂ ಅಡ್ಕಸ್ಥಳ

ಮಂಗಳೂರು, ಅ.31: ಅನಿವಾಸಿ ಭಾರತೀಯ ಉದ್ಯಮಿ ಅಬ್ದುಲ್ಲಾ ಮಾದುಮೂಲೆ, ಪತ್ರಕರ್ತ ಇಬ್ರಾಹೀಂ ಅಡ್ಕಸ್ಥಳ ಹಾಗೂ ಸಾಹಿತ್ಯ ಕ್ಷೇತ್ರದ ಸಾಧಕ ಡಾ. ಪ್ರಭಾಕರ ನೀರುಮಾರ್ಗ ಸಹಿತ 46 ಮಂದಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಅಲ್ಲದೆ ಉಳ್ಳಾಲ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಸಹಿತ 17 ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಹರೇಕಳ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಅವರಿಗೂ ಪ್ರಶಸ್ತಿ ಲಭಿಸಿದೆ.

ನ.1ರಂದು ಬೆಳಗ್ಗೆ 9ಕ್ಕೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ಪೀಕರ್ ಯು.ಟಿ.ಖಾದರ್ ಅವರ ಸಮ್ಮುಖ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಪ್ರದಾನಿಸಲಿದ್ದಾರೆ.










 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News