×
Ad

ವಿಟ್ಲ: ವಿಟ್ಠಲ ಪ್ರೌಢಶಾಲೆಯಲ್ಲಿ ಅಮೃತ ಸೌಧದ "ಶಿಲಾ ಪೂಜನ" ಕಾರ್ಯಕ್ರಮ

Update: 2025-12-28 17:50 IST

ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ಇದರ ಪ್ರೌಢಶಾಲಾ ವಿಭಾಗದ ಅಮೃತ ಮಹೋತ್ಸವದ ಯೋಜನೆಯ ಅಮೃತ ಸೌಧದ "ಶಿಲಾ ಪೂಜನ" ಕಾರ್ಯಕ್ರಮ ವಿಟ್ಠಲ ಪ್ರೌಢಶಾಲೆಯಲ್ಲಿ ರವಿವಾರ ನಡೆಯಿತು.

ಅಮೃತ ಸೌಧದ ಶಿಲಾನ್ಯಾಸ ಕಾರ್ಯಕ್ರಮ ನಿವೃತ್ತ ಪ್ರಾಂಶುಪಾಲ ರಾಧಾಕೃಷ್ಣ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಒಶಿಮಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಇದರ ಅಧ್ಯಕ್ಷರು  ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೂಡೂರು ರಾಮಚಂದ್ರ ಭಟ್ ವಹಿಸಿದ್ದರು.

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ, ಮೈಸೂರು ಎಸ್ ಎಲ್ ವಿ ಬುಕ್ಸ್ ಇಂಡಿಯಾ ಮಾಲಕ ದಿವಾಕರ್ ದಾಸ್ ನೇರ್ಲಾಜೆ, ಬಂಟ್ವಾಳ ಪ್ರಭಾಕರ ರಾವ್ ಫೌಂಡೇಶನ್ ಪ್ರತಿನಿಧಿ ವಿಟ್ಲ ಮಂಗೇಶ್ ಭಟ್ ಇವರು ಭಾಗವಹಿಸಿದ್ದರು.

ನ್ಯಾಯ ಮೂರ್ತಿ ರಾಜೇಶ್ ರೈ ಕಲ್ಲಂಗಳ ಅಮೃತ ಸೌಧದ ವಿಜ್ಞಾಪನಾ ಪತ್ರ ಅನಾವರಣಗೊಳಿಸಿದರು.

ಈ ವೇಳೆ ವಿಟ್ಠಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಶಂಕರನಾರಾಯಣ ಪ್ರಸಾದ್, ಉಪಾಧ್ಯಕ್ಷ ಸುಬ್ರಾಯ ಪೈ, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯ ರವಿಪ್ರಕಾಶ್, ಕೌನ್ಸಿಲ್ ಸದಸ್ಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಟ್ಠಲ ಎಜುಕೇಶನ್ ಸೊಸೈಟಿ ಸಂಚಾಲಕ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ ವಂದಿಸಿದರು. ಅಧ್ಯಾಪಕ ರಾಜಶೇಖರ್‌ ನಿರೂಪಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News