ಮಿತ್ತೂರು : ಕೆ.ಜಿ.ಎನ್‌ನಲ್ಲಿ ಅಜ್ಮೀರ್ ಮೌಲಿದ್, ಸನದುದಾನ ಸಮಾರಂಭ
ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ 'ಖ್ವಾಜಾ ಗರೀಬ್ ನವಾಝ್ ಪ್ರಶಸ್ತಿʼ ಪ್ರದಾನ
ಬಂಟ್ವಾಳ ಡಿ.26: ಮಾಣಿ ದಾರುಲ್ ಇರ್ಶಾದ್ ಅಧೀನದ ಮಿತ್ತೂರು ಕೆ.ಜಿ.ಎನ್. ದಅವಾ ಕಾಲೇಜು ವಠಾರದಲ್ಲಿ ಅಜ್ಮೀರ್ ಮೌಲಿದ್ ಮತ್ತು 6 ನೇ ಸನದುದಾನ ಸಮಾರಂಭ ಶನಿವಾರ ನಡೆಯಿತು.
ಕೇರಳ ಮುಸ್ಲಿಮ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸಾದಾತ್ ಖಲೀಲುಲ್ ಬುಖಾರಿ ತಂಙಳ್, ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕರ್ನಾಟಕ ಜಮ್ಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಸ್ಸಯ್ಯಿದ್ ಶಹೀರ್ ತಂಙಳ್ ಪೊಸೋಟ್, ಅಸ್ಸಯ್ಯಿದ್ ಮಶ್ಹೂದ್ ತಂಙಳ್ ಕೂರತ್, ಡಾ. ಫಾಝಿಲ್ ರಝ್ವಿ ಕಾವಳಕಟ್ಟೆ, ಸ್ವಾಲಿಹ್ ಸಅದಿ ತಳಿಪ್ಪರಂಬ್, ಲತೀಫ್ ಹಾಜಿ ಹರ್ಲಡ್ಕ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಸ್ತುತ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ 'ಖ್ವಾಜಾ ಗರೀಬ್ ನವಾಝ್ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ರಫೀಕ್ ಮಾಸ್ಟರ್, ಡಾ. ನುಹ್ಮಾನ್, ಅನ್ವರ್ ಗೂಡಿನಬಳಿ, ಹಾಜಿ ಸುಲೈಮಾನ್ ನಾರ್ಶ, ಇಬ್ರಾಹಿಂ ಸಅದಿ ಮಾಣಿ, ಅತಾವುಲ್ಲಾ ಕಡಬ ಮೊದಲಾದವರು ಉಪಸ್ಥಿತರಿದ್ದರು.
ಹುಸೈನ್ ಮುಈನಿ ಸ್ವಾಗತಿಸಿ, ವಂದಿಸಿದರು.