ಅಲ್ ಮದೀನಾ ಶಾಲೆಯಲ್ಲಿ ವಾರ್ಷಿಕ ಕಲಾ ಸಾಂಸ್ಕೃತಿಕ ಕಾರ್ಯಕ್ರಮ
ಉಳ್ಳಾಲ: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಅಧೀನದ ಅಲ್ ಮದೀನಾ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ವಾರ್ಷಿಕ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ಅಲ್ ಮೆಮ್ಸ್ ಆರ್ಟ್ ಕಾರ್ನಿವಲ್ ಜುಬಿಲೋನೋ2 ಕೆ 25 ಫೆಸ್ಟಿವಲ್ ನ ಸಮಾರೋಪ ಡಿ.6 ರಂದು ಶನಿವಾರ ಸಂಜೆ ನಡೆಯಲಿದೆ ಎಂದು ಅಲ್ ಮದೀನಾ ಸಂಸ್ಥೆಯ ಶಿಕ್ಷಕ ಅಬ್ದುಲ್ ರಝಾಕ್ ಮಾಸ್ಟರ್ ಹೇಳಿದರು.
ಡಿ.4ಗುರುವಾರ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ವೈವಿಧ್ಯಮಯ ವಿಷಯಗಳಲ್ಲಿ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ಲೈಡಿಂಗ್ ಸ್ಟಾರ್ಸ್, ರೋರಿಂಗ್ ಸ್ಟಾರ್ಸ್ ಎಂಬ ಎರಡು ತಂಡದ ಹೆಸರಿನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದರು.
ಡಿ.6 ಶನಿವಾರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಸ್ಪೀಕರ್ ಯುಟಿ ಖಾದರ್ ಉದ್ಘಾಟಿಸಲಿದ್ದಾರೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮದರಸ ಮುಖ್ಯ ಅಧ್ಯಾಪಕ ಅಬೂಬಕ್ಕರ್ ಮದನಿ ಪಡಿಕ್ಕಲ್,ಕನ್ವಿನರ್ ಮೊಯ್ದಿನ್ ಕುಂಞಿ ಕಲ್ಕಟ್ಟ, ವೈಸ್ ಕನ್ವಿನರ್ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.