×
Ad

2026ರ ಅವಧಿಗೆ ಎಸ್‌ಐಒ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮುಸ್ತಫಾ ಬೆಂಗ್ರೆ ಅವಿರೋಧ ಆಯ್ಕೆ

Update: 2025-12-14 17:13 IST

ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ, ದಕ್ಷಿಣ ಕನ್ನಡ ಘಟಕ ಇದರ 2026ನೇ ಅವಧಿಗೆ ಮುಸ್ತಫಾ ಬೆಂಗ್ರೆ ಅವರು ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಸ್‌ಐಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸುಫಿಯಾನ್ ಝೈನ್ ಅವರ ನೇತೃತ್ವದಲ್ಲಿ ನಡೆದ ಆಂತರಿಕ ಸಾಂಸ್ಥಿಕ ಪ್ರಕ್ರಿಯೆಯ ಮೂಲಕ ಈ ಚುನಾವಣೆ ನಡೆಸಲಾಯಿತು.

​ಮುಸ್ತಫಾ ಬೆಂಗ್ರೆ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಬಿಬಿಎ ಪದವಿಯನ್ನು ಪಡೆದಿದ್ದು, ಮಂಗಳೂರಿನ ಕಸ್ಬಾ ಬೆಂಗ್ರೆ ನಿವಾಸಿಯಾಗಿದ್ದಾರೆ. 

ಈ ಹಿಂದೆ ಅವರು ಎಸ್‌ಐಒ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮತ್ತು ಎಸ್‌ಐಒ ಮಂಗಳೂರು ನಗರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News