×
Ad

ಮಂಗಳೂರು: ಡಿ. 16 ರಂದು ʼಖುತಬಾ ಸಂಗಮʼ

Update: 2025-12-14 20:10 IST

ಮಂಗಳೂರು: ಎಸ್‌ವೈಎಸ್ ರಾಜ್ಯ ಸಮಿತಿಯು ಹಮ್ಮಿಕೊಂಡಿರುವ 'ಮಾದರಿ ಮದುವೆ ಶತದಿನ ಅಭಿಯಾನ'ದ ಭಾಗವಾಗಿ ಎಸ್‌ವೈಎಸ್ ವೆಸ್ಟ್ ಜಿಲ್ಲಾ ವ್ಯಾಪ್ತಿಯ ಖತೀಬರು ಹಾಗೂ ಇಮಾಮರಿಗಾಗಿ ನಡೆಸಲ್ಪಡುವ 'ಖುತಬಾ ಸಂಗಮ'ವು ಡಿಸೆಂಬರ್ 16 ಮಂಗಳವಾರ, ಬೆಳಿಗ್ಗೆ 10:00 ಗಂಟೆಗೆ ಪಂಪ್‌ವೆಲ್ ಡಿ.ಕೆ.ಸಿ ಹಾಲ್ ನಲ್ಲಿ ನಡೆಯಲಿದೆ.

ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸುವರು.

ಸ್ವಾಗತ ಸಮಿತಿ ಚೇರ್ಮೇನ್ ಅಬ್ದುರ್ರಹ್ಮಾನ್ ಸ‌ಅದಿ ಕಂಕನಾಡಿ, ಜಿಲ್ಲಾ ಉಪಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್‌ಪದವು ಮುನ್ನುಡಿ ಭಾಷಣ ಮಾಡಲಿದ್ದು, ಪ್ರಸಿದ್ಧ ಚಿಂತಕ, ಸಂಶೋಧಕ ಇಬ್ರಾಹೀಂ ಸಖಾಫಿ ಪುಝಕ್ಕಾಟ್ಟಿರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಗತಿ ಮಂಡಿಸಲಿದ್ದಾರೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News