ಅಸ್ಸುಫ್ಫಾ ಫೌಂಡೇಶನ್‌ನಿಂದ ಮೀಲಾದ್ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು: ನಗರದ ಜೆಪ್ಪುವಿನಲ್ಲಿರುವ ಅಸ್ಸುಫ್ಫಾ ಫೌಂಡೇಶನ್ ವತಿಯಿಂದ ʼಸೋರ್ಸ್ ಆಫ್ ಅಲ್ಟಿಮೇಟ್ ಲವ್ʼ ಎಂಬ ಗುರಿಯೊಂದಿಗೆ ಒಂದು ತಿಂಗಳ ಕಾಲ ನಡೆಸಲಾಗುವ ಮೀಲಾದ್ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೈಯದ್ ಕೆ.ಎಸ್. ಆಟಕ್ಕೋಯ ತಂಳ್ ಕುಂಬೋಳ್ ಮತ್ತು ಶೈಖುನಾ ಜೆಪ್ಪು ಉಸ್ತಾದ್ ಸಂದೇಶ ನೀಡಿದರು. ಅಸುಫ್ಫಾ ಫೌಂಡೇಶನ್‌ನ ಸ್ಥಾಪಕ ಮತ್ತು ಅಧ್ಯಕ್ಷ ರಶೀದ್ ಸಅದಿ ಬೋಳಿಯಾರ್ ಮತ್ತು ಅಸುಫ್ಫಾ ಫೌಂಡೇಶನ್‌ನ ಉಪಾಧ್ಯಕ್ಷ ಅಮೀನ್ ಹಾಜಿ ಮಾತನಾಡಿದರು.
ಮುಸ್ಲಿಮರಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರ ಪ್ರೀತಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿ ರುವ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಸರಣಿ ಕಾರ್ಯಕ್ರಮ ಇದಾಗಿದೆ. ತಿಂಗಳ ಕಾಲ ನಡೆಯುವ ಈ ಕಾರ್ಯಕ್ರಮ ದಲ್ಲಿ ಪ್ರಮುಖ ವಿದ್ವಾಂಸರು, ಗಣ್ಯರು ಭಾಗವಹಿಸಲಿದ್ದಾರೆ.
ಆ.24ರಂದು ಮಗ್ರಿಬ್ ನಮಾಝ್ ಬಳಿಕ ಅಜ್ಮೀರ್‌ನ ಸೈಯದ್ ಹಮ್ಮಾದುಲ್ ಹಸನ್ ಚಿಸ್ತಿ ಮತ್ತು ಅನಸ್ ಅಮಾನಿ ಪುಷ್ಪಗಿರಿ ಹಾಗೂ ಆ.25ರಂದು ಶ್ರೀಲಂಕಾದ ಹಾಫಿಝ್ ಎಹ್ಸಾನ್ ಇಕ್ಬಾಲ್ ಖಾದ್ರಿ ಭಾಗವಹಿಸಿ ಮೀಲಾದ್ ಸಂದೇಶ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.