ಆ.2: ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ಶೈಕ್ಷಣಿಕ ಹೆಲ್ಪ್‌ಡೆಸ್ಕ್; ಕಾರ್ಯಾಗಾರ
ಮಂಗಳೂರು, ಜು.24:ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಮೀಫ್ ವಿದ್ಯಾಸಂಸ್ಥೆಗಲ್ಲಿ ಶೈಕ್ಷಣಿಕ ಸ್ಕಾಲರ್‌ಶಿಪ್‌ಗೆ ಸಂಬಂಧಿಸಿ ಪೂರ್ಣಪ್ರಮಾಣದ ಹೆಲ್ಪ್ ಡೆಸ್ಕ್ ಅನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಜೊತೆಗೆ ವಿದ್ಯಾಸಂಸ್ಥೆಗಳ ಕಚೇರಿ ದಾಖಲೆಗಳನ್ನು ನಿಯಮಾನು ಸಾರ ನಿರ್ವಹಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಆ.2ರಂದು ನಗರದ ಜೆಪ್ಪಿನ ಮೊಗರಿನ ಯೆನೆಪೋಯ ಪಿ.ಯು ಕಾಲೇಜಿನಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ.
ಪ್ರತಿ ವಿದ್ಯಾಸಂಸ್ಥೆಯ ಇಬ್ಬರು ಕಚೇರಿ ಸಿಬ್ಬಂದಿಗಳು ಭಾಗವಹಿಸಲು ಅವಕಾಶವಿದೆ. ಮುಡಾ ಆಯುಕ್ತ ಮುಹಮ್ಮದ್ ನಝೀರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ದ.ಕ. ಜಿಲ್ಲಾ ಅಲ್ಪಸಂಖ್ಯಾತ ಇಲಾಖಾಧಿಕಾರಿ ಜಿನೇಂದ್ರ ಕೋಟ್ಯಾನ್ ಮತ್ತು ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ಭಾಗವಹಿಸಿ ತರಬೇತಿ ನೀಡಲಿದ್ದಾರೆ.
ಕಾರ್ಯಾಗಾರದಲ್ಲಿ 150 ಸಿಬ್ಬಂದಿಗಳಿಗೆ ಭಾಗವಹಿಸಲು ಅವಕಾಶವಿದ್ದು, ಜು.26ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಕನ್ವೀನರ್ ಅನ್ವರ್ ಹುಸೈನ್ ಗೂಡಿನಬಳಿ (ಮೊ.ಸಂ: +91 76194 67805ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.