ಬಹರೈನ್ | ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಬಹರೈನ್, ನ.29 : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್(ರಿ) ಆಯೋಜಿಸಿದ ಕರ್ನಾಟಕ ರಾಜೋತ್ಸವ ಸಂಭ್ರಮ 2025ರ ಕಾರ್ಯಕ್ರಮವು ಬಹರೈನ್ ನ ದಿ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಭಾರತೀಯ ರಾಯಭಾರಿ ಎಚ್.ಇ. ವಿನೋದ್ ಕೆ. ಜೇಕಬ್ ಕರ್ನಾಟಕ ರಾಜೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತುಳು ಕನ್ನಡಿಗರು ಸತತ ಪ್ರಯತ್ನದಿಂದ ಎಲ್ಲಾ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ. ನಮ್ಮ ರಾಯಭಾರಿ ಕಚೇರಿಗೆ ತುಳು ಕನ್ನಡಗರ ಕೊಡುಗೆ ಅಪಾರ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿದರು.
ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಶಕೀಲ್, ಸೋನಾ ಗ್ರೂಪ್ ನ ಸ್ಥಾಪಕ ಯಜ್ಞ ನಾರಾಯಣ ಕಮ್ಮಜೆ, ಅಥ್ಲೆಟಿಕ್ಸ್ ಅಸೋಸಿಯೇಶನ್ ಉಡುಪಿ ಜಿಲ್ಲಾಧ್ಯಕ್ಷ ಹರಿಪ್ರಸಾದ್ ರೈ, ಅಬಕಾರಿ ಅಧಿಕಾರಿ ರಾಜಶೇಖರ್ ರಾಯಪ್ಪಕಾರಾಡ್ಕರ್, ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್ರಿಗೆ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ (ರಿ) ಕೊಡಮಾಡುವ ಬಹರೈನ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಅತಿಥಿಯಾಗಿ ಬಹರೈನ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಉಪಾಧ್ಯಕ್ಷ ಮುಹಮ್ಮದ್ ಅಬ್ದುಲ್ ಜಬ್ಬಾರ್ ಅಲ್-ಕೂಹೆಜಿ, ಪ್ರವಾಸಿ ಭಾರತೀಯ ಪ್ರಶಸ್ತಿ ಪುರಸ್ಕೃತ ಜಿ.ಬಾಬು ರಾಜನ್, ದಿ ಇಂಡಿಯನ್ ಕ್ಲಬ್ ಅಧ್ಯಕ್ಷ ಜೋಸೆಫ್ ಜ್ವಾಯಿ, ಬಹರೈನ್ ಕ್ರಿಕೆಟ್ ಫೆಡರೇಶನ್ ನ ಸಲಹಾ ಸಮಿತಿಯ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಕನ್ನಂಗಾರ್ ಭಾಗವಹಿಸಿದ್ದರು.
ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್(ರಿ) ಅಧ್ಯಕ್ಷ ರಾಜ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಸ್ತಿಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಲಹೆಗಾರ ಅಸ್ಟೀನ್ ಸಂತೋಷ್ ವಂದಿಸಿದರು.