ಬ್ಯಾಂಕ್ ಆಫ್ ಬರೋಡಾದಿಂದ ಅಂತರರಾಷ್ಟ್ರೀಯ ಅಂಗವಿಕಲರ ದಿನಾಚರಣೆ
ಮುಂಬೈ, ಡಿ.4: ದೇಶದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಸ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ ಕಾರ್ಪೊರೇಟ್ ಕಚೇರಿಯಲ್ಲಿ ಬ್ಯಾಂಕ್ ಅಬಿಲಿಟೀಸ್ ಭಿನ್ನ ಸಾಮರ್ಥ್ಯ ಹೊಂದಿರುವವರ ಸಾಮರ್ಥ್ಯಗಳ ಬ್ಯಾಂಕಿಂಗ್ ಎಂಬ ಥೀಮ್‌ನಡಿ ಅಂಗವಿಕಲರ ಅಂತರರಾಷ್ಟ್ರೀಯ ದಿನವನ್ನು ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಿತು.
ಉದ್ಯೋಗಿಗಳು ಮತ್ತು ಸಮುದಾಯದೊಳಗೆ ಅಂಗವಿಕಲರ ಬಗ್ಗೆ ಅರಿವು, ಒಳಗೊಳ್ಳುವಿಕೆ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಬ್ಯಾಂಕ್ಸ್‌ನ ಬದ್ಧತೆಯನ್ನು ಈ ಕಾರ್ಯಕ್ರಮ ಸಾರಿತು.
ಬ್ಯಾಂಕ್‌ನ ಒಟ್ಟು ಕಾರ್ಯಬಲದ ಸುಮಾರು ಶೇ.3 ಪ್ರತಿನಿಧಿಸುವ 2,325ಕ್ಕೂ ಅಧಿಕ ಅಂಗವಿಕಲ ಉದ್ಯೋಗಿಗಳೊಂದಿಗೆ ಬ್ಯಾಂಕ್ ಆಫ್ ಬರೋಡಾ ಸುಲಭ ಪ್ರವೇಶಯೋಗ್ಯ ಕೆಲಸದ ಸ್ಥಳಗಳು, ಸಹಾಯಕ ಸಾಧನಗಳು, ಕಸ್ಟಮೈಸ್ಡ್ ಪಾತ್ರಗಳು ಹಾಗೂ ಸಮಾನ ಬೆಳವಣಿಗೆ ಅವಕಾಶಗಳನ್ನು ಒದಗಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕಿ ಬೀನಾ ವಹೀದ್ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿ ಸದಸ್ಯರಿಂದ ನಾಟಕ, ಪ್ರೇರಣಾದಾಯಕ ಅಂಗವಿಕಲ ಸಾಧಕಿ, ದೃಷ್ಟಿಹೀನ ಉದ್ಯಮಿ ಸುಶ್ಮೀತಾ ಬಿ. ಬುಬ್ನಾ ಹಾಗೂ ದೇಶೀಯ ವೀಲ್ಚೇರ್ ಬಾಸ್ಕೆಟ್‌ಬಾಲ್ ಗೋಲ್ಡ್ ಮೆಡಲಿಸ್ಟ್ ಪ್ರೇರಣಾ ಧೋನ್ ಅವರನ್ನು ಸನ್ಮಾನಿಸಲಾಯಿತು.
ದೃಷ್ಟಿಹೀನರ ಬಳಗ ಬಾಂಸುರಿ ಬ್ಲಿಸ್ ಅವರ ಸಂಗೀತ ಕಾರ್ಯಕ್ರಮ ಹಾಗೂ ಭಿನ್ನ ಸಾಮರ್ಥ್ಯ ಕಲಾವಿದರಿಂದ ವಸ್ತುಗಳ ಪ್ರದರ್ಶನ ನಡೆಯಿತು.