×
Ad

ಬಂಟ್ವಾಳ | ಮೌಲಾನಾ ಆಝಾದ್ ಪಬ್ಲಿಕ್ ಸ್ಕೂಲ್‌ನಲ್ಲಿ ವಾರ್ಷಿಕ ಕ್ರೀಡಾಕೂಟ

Update: 2025-11-30 18:00 IST

ಬಂಟ್ವಾಳ : ಪುದು ಇಲ್ಲಿನ ಕರ್ನಾಟಕ ಮೌಲಾನಾ ಆಝಾದ್ ಪಬ್ಲಿಕ್ ಸ್ಕೂಲ್ ಇದರ 2025-26 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಶನಿವಾರ ನಡೆಯಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಶಿಕ್ಷಣದ ಜೊತೆ ಕ್ರೀಡೆಯನ್ನು ಮೈಗೂಡಿಸಿಕೊಂಡಾಗ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಉಮರ್ ಫಾರೂಕ್, ಕೋಶಾಧಿಕಾರಿ ಅಬ್ದುಲ್ ಮಜೀದ್ ಅತಿಥಿಗಳಾಗಿ ಭಾಗವಹಿಸಿದ್ದರು.

ಶಾಲಾ ಪ್ರಾಂಶುಪಾಲ ಮುಹಮ್ಮದ್ ಫಾರೂಕ್ , ಕಚೇರಿ ಸಹಾಯಕ ಅಬ್ದುಲ್ ಮಜೀದ್, ಸುಜೀರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕನಾಯ್ಕ್ , ದೈಹಿಕ ಶಿಕ್ಷಕ ಇಮ್ತಿಯಾಝ್‌, ಶಾಲಾ ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.

ರಬೀಅತ್ತುಲ್ ಅದ್ ವಿಯ ಸ್ವಾಗತಿಸಿ, ಅಲ್ ನಿಧಾ ಫಾತಿಮಾ ವಂದಿಸಿದರು. ಹಲೀಮತ್ ರಶೀದ, ಪುನೀತ್‌ ಮತ್ತು ರಝೀಯ ಎಸ್.ಪಿ. ವಿವಿಧ ಕಾರ್ಯಕ್ರಮ ನಿರೂಪಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News