×
Ad

ಬಂಟ್ವಾಳ: ಜಮಿಯತುಲ್ ಫಲಾಹ್ ವತಿಯಿಂದ ಉಮೀದ್ ಪೋರ್ಟಲ್ ನಲ್ಲಿ ವಕ್ಫ್ ಆಸ್ತಿ ನೋಂದಣಿ ಕಾರ್ಯಕ್ರಮ

Update: 2025-11-26 14:01 IST

ಬಂಟ್ವಾಳ : ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಹಾಗೂ ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ ಇವುಗಳ

ಸಹಯೋಗದೊಂದಿಗೆ ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್ ಗೆ ನೋಂದಣಿ ಕಾರ್ಯಕ್ರಮ ಮೆಲ್ಕಾರ್ ನ ಜಮೀಯ್ಯತುಲ್ ಫಲಾಹ್ ಕಛೇರಿಯಲ್ಲಿ ಬುಧವಾರ ನಡೆಯಿತು.

ನ. 26 ಮತ್ತು 27 ರಂದು ಮೆಲ್ಕಾರ್ ನ ಜಮೀಯ್ಯತುಲ್ ಫಲಾಹ್ ಕಛೇರಿಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಫಲಾಹ್ ನ ಪೂರ್ವಾದ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಉದ್ಘಾಟಿಸಿದರು. ಘಟಕಾದ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ವಿವಿಧೆಡೆ ಇದೇ ರೀತಿ ನೋಂದಣಿ ಕಾರ್ಯಕ್ರಮ ಉಚಿತವಾಗಿ ನಡೆಸಿಕೊಟ್ಟ ಮಲಾರ್ ಅರಸ್ತಾನ ಜುಮಾ‌ ಮಸೀದಿ ಖತೀಬ್ ಶಫೀಕ್ ಕೌಸರಿ ಕುಕ್ಕಾಜೆ ಅವರನ್ನು ಗೌರವಿಸಲಾಯಿತು.

 

ಜಮೀಯ್ಯತುಲ್ ಫಲಾಹ್ ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ಮೊಹಮ್ಮದ್, ಕೆ.ಎಸ್. ಮೊಹಮ್ಮದ್, ಶೇಖ್ ರಹಮತುಲ್ಲಾ ಭಾಗವಹಿಸಿದ್ದರು.

ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ನಿರೂಪಿಸಿದರು. ಆಶಿಕ್ ಕುಕ್ಕಾಜೆ ವಂದಿಸಿದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News