×
Ad

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

Update: 2024-08-20 20:51 IST

ಬಂಟ್ವಾಳ: ಮಹಿಳೆಯೋರ್ವರ ಮೃತದೇಹ ನೇತ್ರಾವತಿ ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.

ಶಂಭೂರು ಗ್ರಾಮದ ಎ.ಎಮ್.ಆರ್. ಪವರ್ ಲಿಮಿಟೆಡ್ ಡ್ಯಾಂ ನ 6ನೇ ಗೇಟ್ ನ ಬಳಿ ಸುಮಾರು 40 ರಿಂದ 50 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಇರುವುದು ಕಂಡು ಬಂದಿದ್ದು, ಸುಮಾರು 15 ದಿನಗಳ ಹಿಂದೆ ಮಹಿಳೆ ನೀರಿಗೆ ಬಿದ್ದು ‌ಮೃತಪಟ್ಟಿರಬಹುದು ಎಂದು‌ ಶಂಕಿಸಲಾಗಿದೆ.

ಎ.ಎಮ್.ಆರ್ ಡ್ಯಾಂ ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಶೆಟ್ಟಿ ಎಂಬವರು ಮೃತದೇಹವನ್ನು ನೋಡಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಎಸ್.ಐ. ಹರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News