×
Ad

ಬೆಳ್ತಂಗಡಿ: ದಲಿತರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ ವ್ಯಕ್ತಿಯ ವಿರುದ್ದ ದೂರು

Update: 2024-03-23 21:01 IST

ಬೆಳ್ತಂಗಡಿ: ಪ್ರವೀಣ್‌ ಮದ್ದಡ್ಕ ಎಂಬಾತನು ತನ್ನ ಫೇಸ್‌ಬುಕ್ ಖಾತೆಯಲ್ಲಿ ದಲಿತರಿಗೆ ಅವಮಾನಿಸಿ ಜಾತಿ ಜನಾಂಗ ಮತ್ತು ಪಂಗಡಗಳ ನಡುವೆ ದ್ವೇಷ ಬಿತ್ತುವ ಹಾಗೂ ಸಮಾಜದ ಸೌಹಾರ್ದತೆಗೆ ಭಂಗವನ್ನುಂಟು ಮಾಡುವಂತಹ ಪೋಸ್ಟ್ ಹಾಕಿದ್ದು, ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕ‌ರ್ ವಾದ) ತಾಲೂಕು ಶಾಖೆಯ ಮೂಲಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಮಾ.21 ರಂದು ಫೇಸ್‌ಬುಕ್ ನಲ್ಲಿ ದಲಿತರ ಬಗ್ಗೆ ಪ್ರವೀಣ್ ಮದ್ದಡ್ಕ ಕೀಳುಮಟ್ಟದ ಪದಗಳನ್ನು ಬಳಸಿ ಜಾತಿ ಜನಾಂಗ ಪಂಗಡಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ ನಡೆಸಿದ್ದಾನೆ. ಈ ರೀತಿ ಪೋಸ್ಟ್ ಹಾಕಿದ ಪ್ರವೀಣ್ ಮದ್ದಡ್ಕ ಎಂಬಾತನ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಬಿ.ಕೆ ವಸಂತ್, ಚಂದು ಎಲ್, ರಮೇಶ್‌ ಆರ್, ಪ್ರಭಾಕರ ಎಸ್. ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News