ಉಳ್ಳಾಲ: ರಹಮಾನಿಯಾ ಜುಮಾ ಮಸೀದಿಯಲ್ಲಿ ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ
ಉಳ್ಳಾಲ: ರಹಮಾನಿಯಾ ಜುಮಾ ಮಸೀದಿ ಮತ್ತು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನೇತೃತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರ ರವಿವಾರ ಪೇಟೆ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೇಟೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಿಯುದ್ದೀನ್ ಹಸನ್ ಅವರು, "ದಾನಗಳಲ್ಲಿ ರಕ್ತದಾನ ಮಹಾದಾನ. ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದರ ಮೂಲಕ ಎಲ್ಲರೂ ಜನರ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು" ಎಂದು ಹೇಳಿದರು
ಪೇಟೆ ಜುಮಾ ಮಸೀದಿ ಖತೀಬ್ ಎ ಕೆ ರಝಾ ಅಲ್ ಅಮ್ಜದಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪೇಟೆ ಜುಮಾ ಮಸೀದಿ ಖಜಾಂಚಿ ಯು.ಬಿ ಯೂಸುಫ್, ಸದಸ್ಯ ಶರೀಫ್ ಸ್ಟೋರ್, ಶರಫತ್ ಬಸ್ತಿಪಡ್ಪು, ಅಝೀಮ್ ಬಸ್ತಿಪಡ್ಪು, ಫಾರೂಕ್ ಸಾದುಕಾನ, ಪೊತ್ತುಬಾವ ಪೇಟೆ ಮತ್ತು ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಫಯಾಜ್ ಕೊಟ್ಟಾರ ಉಪಸ್ಥಿತರಿದ್ದರು.
ಬುಸ್ತಾನುಲ್ ಉಲೂಮ್ ಮದರಸ ಸದರ್ ಬಿ ಕೆ ಅಬ್ದುಲ್ ಖಾದರ್ ಮದನಿ ಅವರು ದುವಾ ನೆರವೇರಿಸಿದರು. ಪೇಟೆ ಜುಮಾ ಮಸೀದಿ ಕಾರ್ಯದರ್ಶಿ ಮುಸ್ತಫಾ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.