×
Ad

BSWT ವತಿಯಿಂದ ಎರಡನೇ ಹಂತದ ಉಚಿತ ಹೊಲಿಗೆ ತರಬೇತಿ ಕೇಂದ್ರಗಳಿಗಾಗಿ ಅರ್ಜಿ ಆಹ್ವಾನ

Update: 2025-06-28 10:52 IST

ಮಂಗಳೂರು: ಭಾರತ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು (BSWT) ಇದರ ದಶಮಾನೋತ್ಸವದ ಪ್ರಯುಕ್ತ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಕೇಂದ್ರಗಳನ್ನು ಆರಂಭಿಸಿದ್ದು, ಇದೀಗ ಮೊದಲನೇ ತರಗತಿ ಪೂರ್ತಿಗೊಂಡಿದೆ. ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು 60 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಶೀಘ್ರದಲ್ಲೇ ಎರಡನೇ ಹಂತದ ತರಗತಿ ಆರಂಭಿಸಲು ತೀರ್ಮಾನಿಸಲಾಗಿದ್ದು ಆಸಕ್ತ ಗ್ರಾಮ ಪಂಚಾಯಿತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೊದಲು ಆಗಮಿಸಿದ ಅರ್ಜಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗಾಗಿ ಆರಂಭಿಸಲಿರುವ ಹೊಲಿಗೆ ತರಬೇತಿ ಕೇಂದ್ರಕ್ಕೆ ಹತ್ತು ಹೊಲಿಗೆ ಯಂತ್ರ ಮತ್ತು ತರಬೇತಿದಾರರ, ಸಹಾಯಕರ ವೇತನವನ್ನು, ತರಗತಿಗೆ ಸಂಬಂಧಪಟ್ಟ ಖರ್ಚು ವೆಚ್ಚಗಳನ್ನು ಸಂಸ್ಥೆಯ ವತಿಯಿಂದ ಭರಿಸಲಾಗುವುದು. ಮೂರು ತಿಂಗಳ ಅವಧಿಯ ಈ ಕೋರ್ಸ್ ನಲ್ಲಿ ಪ್ರತಿದಿನ ಮೂರು ಬ್ಯಾಚ್ ಇರುತ್ತದೆ.

ಹೊಲಿಗೆ ತರಬೇತಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಅಂಕ ಪಡೆದ ಪ್ರತೀ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು. ತರಬೇತಿ ಪಡೆದ ಎಲ್ಲರಿಗೆ ಸರ್ಟಿಫಿಕೇಟ್ ಮತ್ತು ಗೌರವ ಕಾಣಿಕೆ ನೀಡಿ ಗೌರವಿಸಲಾಗುವುದು.

ತರಗತಿಗೆ ಅನುಕೂಲವಾಗುವಂತೆ ಕಟ್ಟಡ ಸೌಕರ್ಯವಿರುವ ಪಂಚಾಯತ್ ಗಳಿಗೆ ಶೀಘ್ರ ಅರ್ಜಿ ಸಲ್ಲಿಸಬಹುದು. ಪ್ರಸ್ತುತ ಮಂಗಳೂರು ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಹಾಗೂ ಉಳ್ಳಾಲ ತಾಲೂಕಿನ ಮುಡಿಪು, ಕುರ್ನಾಡು, ಅಸ್ಸೈ, ಕೈರಂಗಳ, ಪಜೀರು, ಮುನ್ನೂರು, ಸಜಿಪ, ಬಾಳೆಪುಣಿ, ಬೆಳ್ಮ, ಕೊಣಾಜೆ ಆಸುಪಾಸಿನ ಗ್ರಾಮ ಪಂಚಾಯಿತ್ ಗಳಿಗೆ ಹೆಚ್ಚಿನ ಆದ್ಯತೆ. ದಿನಾಂಕ 2025 ಜುಲೈ 5ರ ಒಳಗಾಗಿ ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಅಧ್ಯಕ್ಷರಾದ ಎನ್ ಅಮೀನ್ ಪ್ರಧಾನ ಕಾರ್ಯದರ್ಶಿ ಆಕೀಫ್ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಮೇಲ್ :bswtmangalore2015@gmail.com

ವಿಳಾಸ

Asheeruddeen Sarthabail

Coordinator

Near Sneha sadana Pakkaldka, Bajal

Kankanady Mangalore

575027

9742937692

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News