ಉಳ್ಳಾಲ: ಪಬ್ಲಿಕ್ ಪರೀಕ್ಷೆಯಲ್ಲಿ ಬುಸ್ತಾನುಲ್ ಉಲೂಮ್ ಮದ್ರಸದ ವಿದ್ಯಾರ್ಥಿಗಳ ಸಾಧನೆ
Update: 2025-03-28 23:25 IST
ಉಳ್ಳಾಲ: ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ಮದ್ರಸಗಳಲ್ಲಿ ನಡೆದ 2024-25 ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಬುಸ್ತಾನುಲ್ ಉಲೂಮ್ ಮದ್ರಸದ ವಿದ್ಯಾರ್ಥಿಗಳಾದ ಐದನೇ ತರಗತಿಯ ಮೊಹಮ್ಮದ್ ಅಯಾನ್ ಅಬ್ದುಲ್ಲಾ (426) ಮತ್ತು ಫಾತಿಮಾ ಅಲ್ಫೀಯ (401) ಹಾಗೂ ಏಳನೇ ತರಗತಿಯ ಆಯಿಷಾ ರಿಹಾನ (531) ಮತ್ತು ಸಾರಾ ಅನ್ಸ್ವೀಫಾ (498) ಉತ್ತಮ ಅಂಕಗಳೊಂದಿಗೆ ಪ್ರಥಮ, ದ್ವಿತೀಯ ಕ್ರಮವಾಗಿ ಸ್ಥಾನ ಪಡೆದಿದ್ದಾರೆ ಎಂದು ರಹಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ.ಮುಹಿಯುದ್ದೀನ್ ಹಸನ್ ತಿಳಿಸಿದ್ದಾರೆ.