ಚಾರ್ಮಾಡಿ ಘಾಟ್| ಸರಕು ಹೇರಿಕೊಂಡು ಹೋಗುತ್ತಿದ್ದ ಲಾರಿಯ ಪ್ಲೇಟ್ ಕಟ್; ಟ್ರಾಫಿಕ್ ಜಾಮ್
Update: 2026-01-23 23:25 IST
ಬೆಳ್ತಂಗಡಿ; ಚಾರ್ಮಾಡಿ ಘಾಟಿಯಲ್ಲಿ ಭಾರೀ ಪ್ರಮಾಣದಲ್ಲಿ ಸರಕು ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ತಿರುವು ಪಡೆದುಕೊಳ್ಳಲು ಸಾಧ್ಯವಾಗದೆ ಪ್ಲೇಟ್ ಕಟ್ ಆಗಿ ರಸ್ತೆ ಮಧ್ಯೆ ಬಾಕಿಯಾಗಿ ಟ್ರಾಫಿಕ್ ಜಾಮ್ ಉಂಟಾದ ಘಟನೆ ಶುಕ್ರವಾರ ಸಂಜೆ ನಡೆದಿದ್ದು ರಾತ್ರಿವರೆಗೂ ಟ್ರಾಫಿಕ್ ಜಾಮ್ ಮುಂದುವರಿದಿದೆ.
ಪ್ಲೇಟ್ ಕಟ್ ಆಗಿರುವ ಕಾರಣದಿಂದ ಲಾರಿ ರಸ್ತೆಯಲ್ಲೇ ನಿಂತ ಕಾರಣ ಘನ ವಾಹನ ಸಂಚಾರಕ್ಕೆ ಅಡ್ಡಿ ಉಂಟಾ ಯಿತು. ಲಘು ವಾಹನಗಳಿಗೆ ಸಂಚರಿಸುವಷ್ಟು ಜಾಗವಿದ್ದು ಬೇಕಾಬಿಟ್ಟಿಯಾಗಿ ವಾಹನಗಳನ್ನು ನುಗ್ಗಿಸಿದ ಕಾರಣ ಮತ್ತಷ್ಟು ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಹಲವು ತಾಸು ಸಾಲುಗಟ್ಟಿ ನಿಲ್ಲಬೇಕಾಯಿತು. ಕೊಲೊಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಸೃಷ್ಟಿ ಯಾಯಿತು. ನಿರಂತರ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಶುಕ್ರವಾರವೇ ಹೆಚ್ಚಿದ್ದು ಘಾಟಿ ಭಾಗದಲ್ಲಿ ವಾಹನ ಸಂಚಾರ ದಟ್ಟಣೆಯು ಅಧಿಕಗೊಂಡಿದೆ.