×
Ad

ಕರಾವಳಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಹಿರಿದು: ನಬಾರ್ಡ್ ಡಿಜಿಎಂ ಯೋಗೇಶ್

ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘಕ್ಕೆ ನಾಬಾರ್ಡ್ ತಂಡದ ಭೇಟಿ

Update: 2026-01-23 20:56 IST

ಪಡುಬಿದ್ರಿ: ದೇಶದ ವಿವಿಧ ಭಾಗಗಳಿಂದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಸುಮಾರು 44 ಮಂದಿ ನಬಾರ್ಡ್ ಅಧಿಕಾರಿಗಳ ತಂಡ ಶುಕ್ರವಾರ ಪಡುಬಿದ್ರಿಯ ವ್ಯಾವಸಾಯಿಕ ಸಹಕಾರಿ ಸಂಸ್ಥೆಗೆ ಭೇಟಿ ನೀಡಿದರು.

ಮಂಗಳೂರು ನಬಾರ್ಡ್‍ನ ತರಬೇತಿ ಸಂಸ್ಥೆಯ ಉಪ ಮಹಾಪ್ರಬಂಧಕ ಯೋಗೇಶ್ ಮಾತನಾಡಿ, ಕರಾವಳಿಯ ಜಿಲ್ಲೆಗಳಲ್ಲಿ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಅಭಿವೃದ್ಧಿಯಲ್ಲಿ ಸಹಕಾರಿ ಸಂಘ ಗಳ ಪಾತ್ರ ಹಿರಿದಾಗಿದೆ. ಹಾಗಾಗಿ ಇಲ್ಲಿನ ಉತ್ತಮ ಅಂಶಗಳನ್ನು ಗುರುತಿಸಿಕೊಂಡು ಮುಂದೆ ಅವುಗಳನ್ನು ತಮ್ಮ ತಮ್ಮ ರಾಜ್ಯದಲ್ಲಿ ಅನುಷ್ಟಾನಿಸಿಕೊಳ್ಳಲು ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ದೇಶದ ಸುಮಾರು 44 ಅಧಿಕಾರಿಗಳಿಗೆ ಎರಡು ವಾರಗಳ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ಈಶಾನ್ಯ ಭಾರತದ ರಾಜ್ಯಗಳು ತಮ್ಮ ಅಭಿವೃದ್ಧಿಗೆ ಸದ್ಯ ರಾಜ್ಯ, ಕೇಂದ್ರ ಸರಕಾರಗಳ ಅನುದಾನವನ್ನು ಅವಲಂಬಿಸಿವೆ. ಅಲ್ಲಿ ಕೂಡಾ ಸಹಕಾರಿ ಸಂಘಗಳ ಕಲ್ಪನೆ ಮತ್ತು ಸಹಕಾರಿ ತತ್ವದ ಅನುಷ್ಟಾನವು ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮೂಲಕದ ಇಂತಹಾ ತರಬೇತಿಗಳಿಂದ ನಡೆಯಲು ಸಾಧ್ಯವೆಂದು ನಬಾರ್ಡ್ ಉಪ ಮಹಾಪ್ರಬಂಧಕ ಯೋಗೇಶ್ ಹೇಳಿದರು.

ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಉಪಾಧ್ಯಕ್ಷ ಗುರುರಾಜ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ, ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಗೋಪಾಲ್ ಬಲ್ಲಾಳ್, ನಿರ್ದೆ?ಶಕರಾದ ವೈ. ರಸೂಲ್, ಗಿರೀಶ್ ಪಲಿಮಾರು, ಮಾಧವ ಆಚಾರ್ಯ, ರಾಜಾರಾಮ, ಕೃಷ್ಣ ಬಂಗೇರ, ಹಸನ್ ಬಾವ, ವಾಸುದೇವ್ ದೇವಾಡಿಗ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News