×
Ad

ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ನಲ್ಲಿ ಕ್ರಿಸ್‌ಮಸ್ - ಹೊಸ ವರ್ಷದ ಮೆಗಾ ಸೇಲ್; ಶೇ 40 ವರೆಗೆ ರಿಯಾಯಿತಿ

Update: 2025-12-18 19:55 IST

ಮಂಗಳೂರು, ಡಿ.18: ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯು ತನ್ನ ಬಹು ನಿರೀಕ್ಷಿತ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಮೆಗಾ ಸೇಲ್ 2025-26 ಅನ್ನು ಘೋಷಿಸಿದೆ. ಹಬ್ಬದ ಕಾಲವನ್ನು ಗ್ರಾಹಕರು ಅತ್ಯುತ್ತಮ ಆಫರ್‌ ಗಳೊಂದಿಗೆ ಸಂಭ್ರಮಿಸಲು ಈ ವಿಶೇಷ ಮಾರಾಟವನ್ನು ಆಯೋಜಿಸಲಾಗಿದೆ.

ಈ ಮೆಗಾ ಸೇಲ್‌ನಲ್ಲಿ ಫರ್ನಿಚರ್, ಮನೆ ಮತ್ತು ಕಚೇರಿ ಒಳಾಂಗಣ ವಿನ್ಯಾಸ, ಇಲೆಕ್ಟ್ರಾನಿಕ್ಸ್, ಟೆಲಿವಿಷನ್‌ಗಳು, ಗೃಹೋಪಯೋಗಿ ಉಪಕರಣಗಳು, ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಅಡುಗೆ ಸಾಮಗ್ರಿಗಳು ಹಾಗೂ ಅಲಂಕಾರಿಕ ವಸ್ತುಗಳು ಸೇರಿದಂತೆ ಪ್ರಮುಖ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಬ್ರ್ಯಾಂಡ್‌ಗಳ ವಿಶಾಲ ಶ್ರೇಣಿ ಲಭ್ಯವಿದೆ. ಆಯ್ದ ಉತ್ಪನ್ನಗಳ ಮೇಲೆ ಶೇ 40 ವರೆಗೆ ರಿಯಾಯಿತಿ, ಶೂನ್ಯ ಮುಂಗಡದೊಂದಿಗೆ ಸುಲಭ ಇಎಂಐ, ಮತ್ತು ಶೇ 100 ಫೈನಾನ್ಸ್ ಸೌಲಭ್ಯಗಳೊಂದಿಗೆ ಮಿತ ಅವಧಿಯ ಅನಿಯಮಿತ ಉಳಿತಾಯವನ್ನು ಗ್ರಾಹಕರು ಪಡೆಯಬಹುದು.

ಹಬ್ಬದ ವಿಶೇಷ ‘‘ಶಾಪ್ ಆ್ಯಂಡ್ ವಿನ್’’ ಆಫರ್ ಅಡಿಯಲ್ಲಿ ಖರೀದಿದಾರರು ಬಂಪರ್ ಬಹುಮಾನಗಳು ಗೆಲ್ಲುವ ಅವಕಾಶ ಇದೆ.

ಬಂಪರ್ ಬಹುಮಾನವಾಗಿ ಮಹೀಂದ್ರ ಎಕ್ಸ್ ಯುವಿ 3ಎಕ್ಸ್‌ಒ ಕಾರು, ಮೊದಲ ಮತ್ತು ಎರಡನೇ ಬಹುಮಾನವಾಗಿ ಸುಝಕಿ ಅವೆನಿಸ್ ಸ್ಕೂಟರ್, ಮೂರನೇ ಬಹುಮಾನವಾಗಿ ಚಿನ್ನದ ನೆಕ್ಲೆಸ್ ಹಾಗೂ ಇನ್ನೂ 6 ಅತ್ಯಾಕಷರ್ಕ ಬಹುಮಾನಗಳಾದ, ಬೆಡ್‌ರೂಂ ಸೆಟ್, ಎಲ್ ಕಾರ್ನರ್ ಸೋಫಾ ಸೆಟ್, ಡೈನಿಂಗ್ ಟೇಬಲ್, ಡಿಡಿ ರೆಫ್ರಿಜರೇಟರ್, 43’ಟಿವಿ, 5 ಗಿಫ್ಟ್ ವೋಚರ್ಸ್‌ ಗೆಲ್ಲುವ ಅಪೂರ್ವ ಅವಕಾಶವಿದೆ.

ಶೋರೂಂನಲ್ಲಿ ಬೆಡ್‌ರೂಮ್ ಸೆಟ್, ಡೈನಿಂಗ್ ಸೆಟ್, ಟಿವಿ ಯೂನಿಟ್, ಆಧುನಿಕ ಕಿಚನ್, ಕ್ರಾಕರಿ ಯೂನಿಟ್, ಕಚೇರಿ ಫರ್ನಿಚರ್, ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಉಪಕರಣಗಳು ಲಭ್ಯವಿದ್ದು, ಮನೆ ಹಾಗೂ ಕಚೇರಿಯ ಎಲ್ಲ ಅಗತ್ಯಗಳಿಗೆ ಒಂದೇ ಸ್ಥಳದಲ್ಲಿ ಸಂಪೂರ್ಣ ಪರಿಹಾರ ದೊರೆಯಲಿದೆ.

ಆಕರ್ಷಕ ಆಫರ್‌ಗಳು, ಉತ್ತಮ ಗುಣಮಟ್ಟ ಮತ್ತು ಗ್ರಾಹಕ ಸ್ನೇಹಿ ಹಣಕಾಸು ಸೌಲಭ್ಯಗಳೊಂದಿಗೆ, ಈ ಹಬ್ಬದ ಕಾಲದಲ್ಲಿ ಕನಸಿನ ಮನೆಗಳನ್ನು ನಿರ್ಮಿಸುವ ತನ್ನ ಬದ್ಧತೆಯನ್ನು ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಮತ್ತೊಮ್ಮೆ ದೃಢಪಡಿಸಿದೆ.

ಗ್ರಾಹಕರು ಯೆಯ್ಯಾಡಿ ಏರ್‌ಪೋರ್ಟ್ ರಸ್ತೆ, ತೊಕ್ಕೊಟ್ಟು-ಕಲ್ಲಾಪು, ವಾಮಂಜೂರು (ಸೈಂಟ್ ಜೋಸೆಫ್ ಚರ್ಚ್ ಎದುರು), ಹಾಗೂ ಲೇಡಿಹಿಲ್-ಚಿಲಿಂಬಿ ಶೋರೂಮ್‌ಗಳಿಗೆ ಭೇಟಿ ನೀಡಿ, ಹಬ್ಬದ ಶಾಪಿಂಗ್‌ನಲ್ಲಿ ಪಾಲ್ಗೊಳ್ಳುವಂತೆ ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News