ಮಾದಕ ವಸ್ತು ಸೇವನೆ ಆರೋಪ: ಯುವಕ ಸೆರೆ
Update: 2025-12-18 19:56 IST
ಮಂಗಳೂರು: ನಗರದ ಬೋಳೂರಿನಲ್ಲಿ ಮಾದಕ ವಸ್ತು ಸೇವಿಸಿದ ಆರೋಪದ ಮೇರೆಗೆ ಬೊಳೂರು ನಿವಾಸಿ ಅಂಕಿತ್ ಎಂಬಾತನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಗಸ್ತು ನಿರತ ಪೊಲೀಸರು ಅಮಲಿನಲ್ಲಿದ್ದಂತೆ ಕಂಡು ಬಂದ ಅಂಕಿತ್‌ನನ್ನು ಹಿಡಿದು ವಿಚಾರಿಸಿದಾಗ ಆತ ಮಾತನಾಡಲು ತಡವರಿಸಿದ್ದು, ಬಳಿಕ ತಪ್ಪೊಪ್ಪಿಕೊಂಡ ಎನ್ನಲಾಗಿದೆ. ಯುವಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ದ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.