×
Ad

ಎಡಪಂಥೀಯ ದೃಷ್ಠಿಕೋನದೊಂದಿಗೆ ಸಮ್ಮಿಳಿತ ದಲಿತ ಚಳವಳಿ ಅಗತ್ಯ: ಕೃಷ್ಣಪ್ಪ ಕೊಂಚಾಡಿ

Update: 2023-09-26 22:05 IST

ಮಂಗಳೂರು, ಸೆ.26: ಎಡಪಂಥೀಯ ದೃಷ್ಠಿಕೋನದೊಂದಿಗೆ ಸಮ್ಮಿಳಿತವಾದ ದಲಿತ ಚಳವಳಿ ಇಂದಿನ ಅವಶ್ಯಕತೆ ಯಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳೂರು ‘ ಸಮತಾ’ ಕಚೇರಿಯಲ್ಲಿ ರವಿವಾರ ನಡೆದ ದಲಿತ ಹಕ್ಕುಗಳ ಸಮಿತಿಯ ಆಯ್ದ ಪ್ರಮುಖ ಕಾರ್ಯಕರ್ತರ ಒಂದು ದಿನದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಜಾತೀಯ ಸೈದ್ಧಾಂತಿಕ ತಳಹದಿಯನ್ನು ಹೊಂದಿರುವ ಯಾವುದೇ ದಲಿತ ಚಳವಳಿ ನಿರೀಕ್ಷಿತ ಪ್ರತಿಫಲವನ್ನು ನೀಡಲಾರದು. ಇಂತಹ ಚಳವಳಿ ವೈಯಕ್ತಿಕ ಮತ್ತು ಸ್ವಾರ್ಥ ಸಾಧನೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನೆಯ ಜಿಲ್ಲಾ ಸಹಸಂಚಾಲಕರಾದ ನಾರಾಯಣ ತಲಪಾಡಿ ವಹಿಸಿದ್ದರು.

ದಲಿತ ಹಕ್ಕುಗಳ ರಾಜ್ಯ ಸಮಿತಿಯ ಸಹಸಂಚಾಲಕರಾದ ಕೆ ಎನ್ ರಾಜಣ್ಣ ಇವರು ಸಂಪನ್ಮೂಲ ವ್ಯಕ್ಯಿಯಾಗಿ ಉಪ ನ್ಯಾಸ ನೀಡಿದರು. ಕಾರ್ಮಿಕ ಸಂಘಟನೆ ಸಿಐಟಿಯುವಿನ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ದಲಿತ ಹಕ್ಕುಗಳ ಸಮಿತಿಯ ಮಾರ್ಗದರ್ಶಕರಾದ ಯೋಗೀಶ್ ಜಪ್ಪಿನಮೊಗ್ರು ಶಿಬಿರಾರ್ಥಿಗಳನ್ನು ಉದ್ಧೇಶಿಸಿ ಭಾಷಣ ಮಾಡಿದರು.

ಅಧ್ಯಯನ ಶಿಬಿರದ ಸಮಾರೋಪ ಭಾಷಣವನ್ನು ಸಿಪಿಐ(ಎಂ) ದ.ಕ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಮಾಡಿದರು. ಜಿಲ್ಲಾ ಸಂಚಾಲಕರಾದ ಕೃಷ್ಣಪ್ಪ ಕೊಣಾಜೆ ಶಿಬಿರದ ಮೇಲುಸ್ತುವಾರಿ ವಹಿಸಿದ್ದರು. ಮಂಗಳೂರು ಘಟಕದ ಅಧ್ಯಕ್ಷ ಕೃಷ್ಣ ಪಿಎ ಸ್ವಾಗತಿಸಿದರು. ಈಶ್ವರಿ ಪದ್ಮುಂಜ ಮತ್ತು ಹೇಮಾ ಪಚ್ಚನಾಡಿ ಇವರು ಕ್ರಾಂತಿಗೀತೆಗಳನ್ನು ಹಾಡಿದರು. ಮಂಗಳೂರು ತಾಲೂಕು ಅಧ್ಯಕ್ಷ ರಾಧಕೃಷ್ಣ ಬೊಂಡಂತಿಲ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News