×
Ad

ಉಪ್ಪಿನಂಗಡಿ: ಕಟ್ಟಡಕ್ಕೆ ಹಾನಿ, ಜೀವ ಬೆದರಿಕೆ; ಪ್ರಕರಣ ದಾಖಲು

Update: 2023-09-12 22:33 IST

ಉಪ್ಪಿನಂಗಡಿ: ಇಲ್ಲಿನ ಪ್ರಧಾನ ವೃತ್ತದ ಬಳಿ ಇರುವ ವಾಣಿಜ್ಯ ಕಟ್ಟಡದ ವಿವಾದಕ್ಕೆ ಸಂಬಂಧಿಸಿ ಅಕ್ರಮ ಪ್ರವೇಶ, ಕಟ್ಟಡಕ್ಕೆ ಹಾನಿ ಹಾಗೂ ಆಕ್ಷೇಪಿಸಿದ್ದಕ್ಕೆ ಜೀವ ಬೆದರಿಕೆಯೊಡ್ಡಲಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿನ ಸುದರ್ಶನ್ ಎಂಬವರು ನೀಡಿದ ದೂರಿನಂತೆ ಅವರ ಮಾಲಕತ್ವದ ಕಟ್ಟಡಕ್ಕೆ 34 ನೇ ನೆಕ್ಕಿಲಾಡಿ ನಿವಾಸಿ ಜಗಜೀವನ್ ರೈ, ಭವಿಷ್ ಜೆ ರೈ, ಸಂದೀಪ್ ಮತ್ತಿತರರು ಅಕ್ರಮ ಪ್ರವೇಶಗೈದು ಹೊಸಕಟ್ಟಡವನ್ನು ನಿರ್ಮಿಸುವ ಸಲುವಾಗಿ ಈಗಿನ ಕಟ್ಟಡಕ್ಕೆ ಹಾನಿಯನ್ನುಂಟು ಮಾಡಿದ್ದು, ಆಕ್ಷೇಪಿಸಿದಾಗ ಅವ್ಯಾಚಪದಗಳಿಂದ ಬೈದು ಜೀವ ಬೆದರಿಕೆಯೊಡ್ಡಿ, ಜೀವ ಬೆದರಿಕೆಯೊಡ್ಡಿರುತ್ತಾರೆಂದು ಆಪಾದಿಸಿದ್ದಾರೆ. ಇದೇ ವಿವಾದಕ್ಕೆ ಸಂಬಂಧಿಸಿ ಜಗಜೀವನ್ ರೈ ಅವರೂ ಪೊಲೀಸರಿಗೆ ದೂರು ನೀಡಿದ್ದು, ಈಗ ಇತ್ತಂಡಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News