×
Ad

ಧರ್ಮಸ್ಥಳ ದೂರು | ಜಿ.ಪಿ.ಆ‌ರ್ ಯಂತ್ರ ಬಳಸಲು ಮುಂದಾದ ಎಸ್‌ಐಟಿ

Update: 2025-08-11 15:41 IST

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ವಿವಿದೆಡೆ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ ಪ್ರಕರಣದ ತನಿಖೆಯಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ನಡೆದಿದ್ದು, ಜಿ.ಪಿ.ಆರ್ ಯಂತ್ರವನ್ನು ಉಪಯೋಗಿಸಿ ಎಸ್‌ಐಟಿ ತನಿಖೆ ಆರಂಭಿಸಿದೆ.

ಇಂದು(ಆ.11) ಎಸ್.ಐ.ಟಿ ತಂಡ ಹಾಗೂ ಜಿ.ಪಿ.ಆರ್ ತಜ್ಞರ ತಂಡ ಸಾಕ್ಷಿ ದೂರುದಾರ ಗುರುತಿಸಿದ 13ನೆಯ ಸ್ಥಳದಲ್ಲಿ ಜಿ.ಪಿ. ಆರ್ ನಿಂದ ಪರಿಶೀಲನೆಗೆ ಸಿದ್ದತೆಗಳು ನಡೆದಿದ್ದು, ಜಿ.ಪಿ.ಆರ್ ಯಂತ್ರವನ್ನು ನೇತ್ರಾವತಿ ಸ್ನಾನಘಟ್ಟದ ಸಮೀಪ ಗುರುತಿಸಿದ 13ನೆಯ ಸ್ಥಳಕ್ಕೆ ತರಲಾಗಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News